ಸುದ್ದಿ ಕನ್ನಡ ವಾರ್ತೆ

ಜೋಯಿಡಾ : ತಾಲೂಕಾ ಕೇಂದ್ರ ಸ್ಥಳದಲ್ಲಿರುವ ಶೌಚಾಲಯ ಗಬ್ಬು ನಾರುತ್ತಿದೆ, ನಿರ್ವಹಣೆ ಇಲ್ಲದೇ ಈ ಸ್ಥಿತಿಗೆ ಬಂದಿದೆ, ಎಂದು ಸಾರ್ವಜನಿಕರು ದೂರಿದ್ದಾರೆ.

ಸಾರ್ವಜನಿಕರು ತಮ್ಮ ದೈನಂದಿನ ಕೆಲಸ ಕಾರ್ಯ ಗಳಿಗೆ ಗ್ರಾಮ ಚಾವಡಿಗೆ ಹೋಗಲೇ ಬೇಕು, ಆದರೆ ಕೆಲಸದ ನಿಮಿತ್ತ ಅರ್ಧ ಗಂಟೆ ಕಳೆಯಲು ಸಹ ಕಸಿವಿಸಿ ಆಗುವಷ್ಟು ವಾಸನೆ ಬರುತ್ತದೆ. ಅಲ್ಲಿ ಕೆಲಸ ಮಾಡುವವರ ಸ್ಥಿತಿಗೆ ದೇವರೇ ಗತಿ ಎನ್ನುವಂತಾಗಿದೆ. ಈ ಶೌಚಾಲಯ ಪ್ರತಿ ಬುಧವಾರ ಜೋಯಿಡಾ ಸಂತೆ ನಡೆಯುವ ಸ್ಥಳದಲ್ಲಿ ಮದ್ಯ ದಲ್ಲಿದೆ, ಸಂತೆಗೆ ಹೋದವರಿಗೂ, ಸಂತೆಗೆ ತರಕಾರಿ ತಂದು ಮಾರುವವರಿಗೂ ಈ ವಾಸನೆ ಬಿಟ್ಟಿಲ್ಲ, ಆದರೆ ಇಲ್ಲಿ ಶೌಚಾಲಯ ಬೇಕೇಬೇಕಿತ್ತು,

 

ಸರಿಯಾದ ಸ್ಥಳದಲ್ಲಿ ಈ ಶೌಚಾಲಯ ವಿದೆ.ಆದರೆ ಇದರ ನಿರ್ವಹಣೆ ಸರಿಯಾಗಿ ಇಲ್ಲದ ಕಾರಣ ಈ ರೀತಿಯ ದುರ್ವಾಸನೆ ಬಂದು ಸ್ಥಳದಲ್ಲಿ ನೆಮ್ಮದಿ ಹಾಳಾಗಿದೆ, ಸೇಫ್ಟಿಕ್ ಟ್ಯಾಂಕ್ ಕೂಡ ಸೋರುತ್ತಿದೆ ಇದರಿಂದ ರೋಗ ರುಜಿನ ಹರಡಲು ಕಾರಣ ವಾಗಿದೆ.

 

ಸಂಬಂಧ ಪಟ್ಟವರು ಈ ಶೌಚಾಲಯ ದ ನಿರ್ವಹಣೆ ಕೂಡಲೇ ಮಾಡಿದರೆ ಎಲ್ಲರ ಆರೋಗ್ಯ ಕ್ಕೆ ಕ್ಷೆಮಕರ, ಇಲ್ಲ ವಾದರೆ ಮುಂದೆ ಬರುವ ಮಳೆಗಾಲದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟು ಹತ್ತಿರ ಸುಳಿಯಲು ಕೂಡ ಅಸಹ್ಯ ವಾಗುವ ಸಾಧ್ಯತೆ ಇದೆ ಇದರ ದುರ್ವಾಸನೆ ಜೋಯಿಡಾ ದ ಮುಖ್ಯ ವೃತ್ತದ ವರೆಗೂ ಬರುತ್ತದೆ ಎನ್ನುವದು ಸಾರ್ವಜನಿಕ ರಿಂದ ಕೇಳಿಬಂದಿದೆ.

ಸಂಬಂಧ ಪಟ್ಟವರು ತಾಲೂಕಿನಲ್ಲಿರುವ ಇಂತ ಶೌಚಾಲಯ ಗಳಿಗೆ ಪ್ರತ್ಯೇಕ ಅನುದಾನ ಕಲ್ಪಿಸಿ, ಸ್ವಚ್ಛತೆ ಯನ್ನು ಮಾಡುತ್ತಿರುವಂತೆ ನೋಡಿಕೊಳ್ಳಬೇಕಾಗಿದೆ.