ಸುದ್ದಿ ಕನ್ನಡ ವಾರ್ತೆ
ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಜೊಯಿಡಾ ತಾಲೂಕು ಮಟ್ಟದ ಚುನಾವಣೆ ಬರುವ ಜುಲೈ 17 ರಂದು ನಡೆಯಲಿದೆ. ಮತದಾನ ಬೆಳಿಗ್ಗೆ 7 ರಿಂದ ಮಧ್ಯಾನ್ಹ 3 ರ ವರೆಗೆ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಜುಲೈ 1 ರಿಂದ 4 ರ ವರೆಗೆ ರೂ 250 ಠೇವಣಿ ಯೊಂದಿಗೆ ನಾಮ ಪತ್ರ ಸಲ್ಲಿಸಬಹುದು. ಜುಲೈ 6 ರಂದು ನಾಮಪತ್ರ ಪರಿಶೀಲನೆ ಜುಲೈ 7 ರಂದು ನಾಮಪತ್ರ ಹಿಂತೆಗೆದು ಕೊಳ್ಳಬಹುದು.
ಅಗತ್ಯ ವಿದ್ದಲ್ಲಿ ಜುಲೈ 17 ರಂದು ಮತದಾನ ಮೂಲಕ ಸದಸ್ಯರ ಆಯ್ಕೆ ನಡೆಯಲಿದೆ. ಅಂದೇ ಫಲಿತಾಂಶ ಕೂಡ ಪ್ರಕಟಿಸಲಾಗುವುದು. ಈ ಸಂಬಂಧ ಹೆಚ್ಚಿನ ಮಾಹಿತಿಗೆ ತಾಲೂಕಾ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.
