ಸುದ್ದಿ ಕನ್ನಡ ವಾರ್ತೆ
ಶಿರಸಿ : ಶಿರಸಿ – ಸಿದ್ದಾಪುರ ಕ್ಷೇತ್ರದ ಬಹುತೇಕ ಹಳ್ಳಿಗಳಲ್ಲಿ ಅಕ್ರಮ ಸಾರಾಯಿ ಕುಡಿದು, ರೈತರು, ಬಡವರು, ಕೂಲಿಕಾರರು ಬಲಿಯಾಗುತ್ತಿದ್ದು ಹಲವಾರು ಜನ ತಮ್ಮ ಕಿಡ್ನಿ ಮತ್ತು ಲಿವರ್ ಹಾಳು ಮಾಡಿ ಕೊಳ್ಳುತ್ತಿದ್ದಾರೆ,
ಹಲವಾರು ಸಾವನ್ನಪ್ಪಿದ್ದಾರೆ , ಅಕ್ರಮ ಸಾರಾಯಿ ತಕ್ಷಣ ನಿಲ್ಲಬೇಕೆಂದು ಆಗ್ರಹಿಸಿ ಮತ್ತು ಇತ್ತೀಚೆಗೆ ಗಾಂಜಾ ಸೇವನೆ ಮತ್ತು ಡ್ರಗ್ಸ್ ಜಾಸ್ತಿಯಾಗಿದೆ, ಆಗಾಗ ಪತ್ರಿಕೆಯಲ್ಲಿ ನೋಡುತ್ತಿದ್ದೇವೆ, ಆದರೆ ಅವರಿಗೆ ಗಾಂಜಾ ಮತ್ತು ಡ್ರಗ್ಸ್ ಸಪ್ಲೈ ಮಾಡುವವರು ಯಾರು? ಅದನ್ನು ಪತ್ತೆ ಹಚ್ಚಬೇಕಲ್ಲವೇ ? ಅದಕ್ಕಾಗಿ ಈ ಹೋರಾಟ,
ತಾಲೂಕಿನ ಬಹುತೇಕ ಶಾಲೆ ಹಾಗೂ ಕಾಲೇಜಿನ ಸಮೀಪದಲ್ಲಿ ಡ್ರಗ್ಸ್ ಹಾಗೂ ಗಾಂಜಾ ಹಾವಳಿ ಹೆಚ್ಚಾಗಿದ್ದು ವಿದ್ಯಾರ್ಥಿಗಳು ಬಲಿಯಾಗುತ್ತಿದ್ದು ಪಾಲಕರ ಆತಂಕಕ್ಕೆ ಕಾರಣವಾಗಿದೆ. ಕ್ಷೇತ್ರದಲ್ಲಿ ಕಳೆದ 2 ವರ್ಷದಿಂದ ಹೆಚ್ಚುತ್ತಿರುವ ಇಂತಹ ಹಲವಾರು ಅನೈತಿಕ ವ್ಯವಹಾರಗಳನ್ನು ತಕ್ಷಣ ಬಂದ್ ಮಾಡುವಂತೆ ಅಗ್ರಹಿಸಿ ಅನಂತ ಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಹಾಗೂ ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳಿಂದ ಇದೆ ಬರುವ 16ಜೂನ್ 2026 ಸಮಯ ಬೆಳಿಗ್ಗೆ 11 ಘಂಟೆಗೆ ಶಿರಸಿ ಸಹಾಯಕ ಆಯುಕ್ತರ ಕಚೇರಿ ಎದುರು ಪ್ರತಿಭಟನೆ, ಹಾಗೂ ಸಹಾಯ ಆಯುಕ್ತರಿಗೆ ಮನವಿ ಸಲ್ಲಿಕೆ ಮಾಡಲಾಗುವುದು.ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಲು ವಿನಂತಿಸಲಾಗಿದೆ.
ಇಂತಿ ಅನಂತ ಮೂರ್ತಿ ಹೆಗಡೆ
ಅಧ್ಯಕ್ಷರು ಚಾರಿಟೇಬಲ್ ಟ್ರಸ್ಟ್
