ಸುದ್ದಿ ಕನ್ನಡ ವಾರ್ತೆ
ಕರ್ನಾಟಕದ ರಾಜಕೀಯ ರಂಗದಲ್ಲಿ ತಮ್ಮದೇ ಆದ ವ್ಯಕ್ತಿತ್ವ, ಸೇವಾ ಮನೋಭಾವ ಹಾಗೂ ಜನಪರ ಚಿಂತನೆಗಳ ಮೂಲಕ ಅಳಿಯದ ಗುರುತು ಮೂಡಿಸಿದ್ದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರು ಹಾಗೂ ಆತ್ಮೀಯರಾದ ಡಿ. ಸುಧಾಕರ್ ಅವರ ಅಗಲಿಕೆಯ ಸುದ್ದಿ ಮನಸ್ಸಿಗೆ ಅತೀವ ನೋವು ಉಂಟುಮಾಡಿದೆ.ಎಂದು ಶಾಸಕರು, ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷರು ಆಗಿರುವ ಆರ್ ವಿ ದೇಶಪಾಂಡೆ ಹೇಳಿದ್ದಾರೆ.
ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು ಅಧಿಕಾರವನ್ನು ಪ್ರತಿಷ್ಠೆಯಾಗಿ ಅಲ್ಲ, ಜನಸೇವೆಯ ಸಾಧನವಾಗಿ ಕಂಡ ಅಪರೂಪದ ನಾಯಕರಾಗಿದ್ದರು. ಸರಳತೆ, ಸೌಜನ್ಯ ಮತ್ತು ಮಾನವೀಯತೆ ಅವರ ಬದುಕಿನ ಮೌಲ್ಯಗಳಾಗಿದ್ದವು.ಜನರ ನೋವಿಗೆ ಸ್ಪಂದಿಸುವ ಹೃದಯ,ಅಭಿವೃದ್ಧಿಯತ್ತ ಇರುವ ದೃಢ ಸಂಕಲ್ಪ ಮತ್ತು ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುವ ಗುಣದಿಂದ ಅವರು ಜನಮನಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ಅವರು ತೋರಿದ ನಿಷ್ಠೆ, ಸೇವಾಭಾವ ಮತ್ತು ಕರ್ತವ್ಯಪರತೆ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿದೆ. ಅವರ ಅಗಲಿಕೆಯಿಂದ ರಾಜ್ಯ ರಾಜಕೀಯ ಹಾಗೂ ಸಾರ್ವಜನಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.
ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಕುಟುಂಬದವರು, ಬಂಧು-ಬಳಗ ಹಾಗೂ ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಸಹಿಸುವ ಧೈರ್ಯ ಮತ್ತು ಶಕ್ತಿಯನ್ನು ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.ಎಂದು ಆರ್ ವಿ ದೇಶಪಾಂಡೆ.ಕಂಬನಿ ಮಿಡಿದಿದ್ದಾರೆ .
ಸಚಿವ ಡಿ ಸುಧಾಕರ್ ನಿಧನಕ್ಕೆ ದೇಶಪಾಂಡೆ ಕಂಬನಿ
