Banner Ad

ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ: ತಾಲೂಕು ಪಟ್ಟಣ ಎಲ್ಲೆಡೆ ಚಳಿಗಾಲದ ಹೊಡತಕ್ಕೆ ಚಿರತೆಯ ಹಾವಳಿ ಹೆಚ್ಚಾಗುತ್ತಿದೆ.

Banner Ad

ದಿನಕ್ಕೊಂದು ಚಿರತೆಯ ದಾಳಿಯ ಸಂಗತಿ ಅಲ್ಲಿ ಇಲ್ಲಿ ಕೇಳಿ ಬರುತ್ತಿದೆ.ಶುಕ್ರವಾರ ಪಟ್ಟಣ ವ್ಯಾಪ್ತಿಯ ಲಿಂಗನಕೊಪ್ಪ ಬಳಿ ಚಿರತೆಯೊಂದು ಆಕಳ ಮಣಕನ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ.ರಾಮನಕೊಪ್ಪ ಹುಣಸೆಟ್ಟಿಕೊಪ್ಪ ಈ ಭಾಗದಲ್ಲಿ ಚಿರತೆ ಸಂಚರಿಸುತ್ತಿದ್ದು  ಇಂದು ಈ ಪ್ರದೇಶದಲ್ಲಿ ಕಾಣಿಸಿಕೊಂಡು ಆಕಳನ್ನು ಬಲಿ ತೆಗೆದುಕೊಂಡಿದೆ

ಯಲ್ಲಾಪುರದ ಗ್ರಾಮೀಣ ಭಾಗಗಳಲ್ಲಿ ಕಳೆದ ಹಲವು ದಿನಗಳಿಂದ ಚಿರತೆಯ ಹಾವಳಿ ಹೆಚ್ಚಾಗಿದೆ. ಜನರು ತಮ್ಮ ಮನೆಯ ಸಾಕು ನಾಯಿ ದನ ಕುರುಗಳನ್ನು ರಕ್ಷಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ.

Banner Ad