ಸುದ್ದಿ ಕನ್ನಡ ವಾರ್ತೆ
ಮಂತ್ರಾಲಯವೆಂದೇ ಪ್ರಸಿದ್ದಿ ಪಡೆದಿರುವ ಶಿರಸಿ ನಗರದ ರಾಘವೇಂದ್ರ ಮಠದಲ್ಲಿ ಇಂದು ನಾಗಪ್ರತಿಷ್ಠಾ ಕಾರ್ಯಕ್ರಮ ಅತ್ಯಂತ ಸಡಗರ ಸಂಭ್ರಮದಿಂದ ನೇರವೇರಿತು. ಮಠದ ಅಧ್ಯಕ್ಷ ಶ್ರೀನಿವಾಸ್ ಹೆಬ್ಬಾರ್ ದಂಪತಿಗಳು ಕಾರ್ಯದ ನೇತೃತ್ವ ವಹಿಸಿದ್ದು ವೇದಮೂರ್ತಿ ಕುಮಾರ ಭಟ್ಟ ಕೊಳಗಿಬೀಸ್ ಇವರ ಮಾರ್ಗದರ್ಶನದಲ್ಲಿ ನಾಗಪ್ರತಿಷ್ಠೆ ಕಾರ್ಯ ನಡೆಯಿತು.

ಮಹತ್ವದ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳಲು ರಾಯರ ಮಠಕ್ಕೆ ಭಕ್ತರ ದಂಡೇ ಹರಿದು ಬರುತ್ತಿದ್ದು, ಇಂದು ಸುಮಾರು ಐದು ಸಾವಿರಕ್ಕೂ ಹೆಚ್ಚು ಭಕ್ತರು ಪೂಜೆ ಮತ್ತು ಮಹಾ ಅನ್ನಪ್ರಸಾದ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಅನ್ನಪ್ರಸಾದಕ್ಕಾಗಿಯೇ ಬೃಹತ್ ಪೆಂಡಾಲ್ ಅಳವಡಿಸಲಾಗಿದ್ದು, ಐದು ಸಾವಿರಕ್ಕೂ ಅಧಿಕ ಭಕ್ತರು ಅನ್ನ ಪ್ರಸಾದ ಸ್ವೀಕರಿಸಿ ಗುರು ರಾಘವೇಂದ್ರ ಸ್ವಾಮಿಗಳ ಆಶಿರ್ವಾದ ಪಡೆದರು.