ಸುದ್ದಿ ಕನ್ನಡ ವಾರ್ತೆ
ಜೋಯಿಡಾ 28 ಮಂಗಳವಾರ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರು ನಮ್ಮ ಜೋಯಿಡಾ ತಾಲೂಕಿಗೂ ಬಂದು ಜನತಾ ದರ್ಶನ ಮಾಡಲಿ ಎಂದು ಸಾರ್ವಜನಿಕರು ಹಿಂದೆ ಆಗ್ರಹಿಸಿದ್ದರು.
ಈಗ ಎರಡನೇ ಬಾರಿ ತಾಲೂಕಿಗೆ ಬನ್ನಿ ಎಂದು ಕರೆಯುತ್ತಿದ್ದಾರೆ ತಾಲೂಕು ಹಲವಾರು ಸಮಸ್ಯೆ ಗಳಿಂದ ಬಳಲುತ್ತಿದೆ, ತಾಲೂಕಿನ ಸಮಸ್ಯೆಗಳು ಬಗೆಹರಿಯುವ ಯಾವ ಲಕ್ಷಣ ಗಳೂ ಕಂಡು ಬರುತ್ತಿಲ್ಲ, ಪ್ರತಿ ಚುನಾವಣೆ ಯಲ್ಲೂ ಜನರು ಆಶ್ವಾಸನೆ ಗಳನ್ನು ಕೇಳಿ ಕೇಳಿ, ಸೋತಿದ್ದಾರೆ, ಸಮಸ್ಯೆ ಬಗೆಹರಿಸುವ ಜನ ನಾಯಕರೇ, ಯಾರಿದ್ದಾರೆ ಎಂದು ಹುಡುಕುವ ದಿನ ಬಂದಿದೆ, ನೀವಾದರೂ ಪರಿಹಾರ ನೀಡಿ, ಎಂದು ಜನತೆ ಆಗ್ರಹಿಸಿದ್ದಾರೆ, ತಾಲೂಕಿನಲ್ಲಿ ಸಾರಿಗೆ ಸಂಸ್ಥೆಯ ಬಸ್ ಘಟಕ ಇಲ್ಲದೇ ಹಲವಾರು ಹಳ್ಳಿಗಳಿಗೆ ಬಸ್ ಹೋಗುತ್ತಿಲ್ಲ, ಹೋಗುವ ಬಸ್ ಕೆಟ್ಟರೂ ತಾಲೂಕಿನಲ್ಲಿ ಒಂದೇ ಒಂದು ಬಸ್ ಇಲ್ಲ ಬೇರೆ ತಾಲೂಕಿನಿಂದ ಬಸ್ ಬರಬೇಕು,ಇದು ತಪ್ಪಿ ಎಲ್ಲ ಹಳ್ಳಿ ಗಳಿಗೆ ಬಸ್ ಹೋಗಲು ಬಸ್ ಘಟಕ ಬೇಕು, ತಾಲೂಕು ಕೇಂದ್ರ ವಾದರೂ ಒಂದು ನ್ಯಾಯಾಲಯ ವಿಲ್ಲ, ನ್ಯಾಯಕ್ಕಾಗಿ ಬೇರೆ ತಾಲೂಕಿಗೆ ಓಡಾಡ ಬೇಕು, ತಾಲೂಕು ಕೇಂದ್ರ ವಾದರೂ, ಸಬ್ ರಜಿಸ್ಟ್ರಾರ ಕಛೇರಿ ಇಲ್ಲ, ಅಧಿಕಾರಿ ಗಳಿಗೆ ವಸತಿ ಗ್ರಹಗಳಿಲ್ಲ, ತಾಲೂಕಿನ ಹೊರಗೆ ಕುಡಿಯುವ ನೀರು ಹೋದರೂ ತಾಲೂಕಿನ ಜನತೆಗೆ ಕುಡಿಯಲು ನೀರಿಲ್ಲ, ಸಣ್ಣ ಪುಟ್ಟ ಯೋಜನೆ ಗಳೂ ಕೂಡ ಮುಗಿಯಲು ಹಲವು ವರ್ಷ ಕಾಯಬೇಕು, ಸ್ಥಳೀಯ ಜನಪ್ರತಿನಿದಿಗಳು, ಆಸಕ್ತಿ ವಹಿಸದ ಕಾರಣ ತಾಲೂಕು ಇದ್ದೂ ಇಲ್ಲದಂತಾಗಿದೆ, ಅಧಿಕಾರಿಗಳು ಸಭೆ ಯಿಂದ ಸಭೆಗೆ ಶಾಸಕರಿಗೆ ಮಾಹಿತಿ ನೀಡಿ ಮರೆಯಾಗು ತ್ತಾರೆ, ಯಾವ ಕಚೇರಿ ಗಳಲ್ಲೂ ಹಿರಿಯ ಅಧಿಕಾರಿಗಳು ಜನತೆಗೆ ಸಿಗುವುದೇ ಇಲ್ಲ, ತಾಲೂಕಿನಲ್ಲಿ ಮಳೆ ಮಾಪನ ಕೇಂದ್ರ ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಹಳ್ಳಿಗಳಿಗೆ ರಸ್ತೆಗಳು ಸರಿಯಾಗಿಲ್ಲ, ಇರುವ ರಸ್ತೆ ಗಳನ್ನು ಅರಣ್ಯ ಇಲಾಖೆ ಯವರು ಮಾಡಲು ಬಿಡುತ್ತಿಲ್ಲ, ರೈತರು ದನ ಮೇಯಿಸಲು ಅರಣ್ಯ ದೊಳಗೆ ಹೋದರೂ ಅರಣ್ಯ ಇಲಾಖೆ ಕಿರಿ ಕಿರಿ ಮಾಡುತ್ತದೆ,ಕುಡಿಯುವ ನೀರಿನ ಯೋಜನೆ ಗಳು ಮೂರು ವರ್ಷ ಗಳಿಂದ ನೆನೆಗುದಿಗೆ ಬಿದ್ದರೂ ಅಧಿಕಾರಿಗಳು ಲಕ್ಷ ಹಾಕುತ್ತಿಲ್ಲ ಎಂಬ ಆತಂಕ ಜನರಲ್ಲಿ ಕಾಡಿದೆ.
ಹಲವು ವರ್ಷ ಗಳಿಂದ ಆಗದೇ ಇರುವ ರಾಮನಗರ ಗೋವಾ ರಸ್ತೆಯಲ್ಲಿಓಡಾಡುವುದೇ ಕಷ್ಟ ಕರ ವಾಗಿದ್ದು, ತಾವು ಒಮ್ಮೆ ಪರಿಶೀಲಿಸಿರಿ ಜೋಯಿಡಾ ನಿಮ್ಮ ಉಸ್ತುವಾರಿ ಯಲ್ಲಿದೆ, ಅದಕ್ಕಾಗಿ ಇದನ್ನೆಲ್ಲ ನೋಡ ಬೇಕಾದ ಉಸ್ತುವಾರಿ ಸಚಿವರು ಒಮ್ಮೆ ಯಾದರೂ ಬಂದು ಜನತಾ ದರ್ಶನ ನೀಡಲಿ ಎಂಬ ಆಶೆ ತಾಲೂಕಿನ ಜನತೆ ಯಲ್ಲಿದೆ ನಿಮ್ಮನ್ನು ನೋಡಿದ ತಾಲೂಕಿನ ಜನ ತುಂಬಾ ಕಡಿಮೆ, ನೀವು ಉಸ್ತುವಾರಿ ಸಚಿವರು ಎಂದು ಜನತೆಗೆ ಪರಿಚಯ ವಾಗಲಿ ಸಮಸ್ಯೆ ಗಳಿಂದ ಬಳಲುವ ತಾಲೂಕಿಗೆ ನ್ಯಾಯ ಕೊಡಿ ಎಂದು ಸಾರ್ವಜನಿಕರು ಕೇಳುತ್ತಿದ್ದಾರೆ. ಸುಮಾರು 18 ಕೋಟಿ ಅವ್ಯವಹಾರ ನಡೆಸಿದ ಜೋಯಿಡಾ ಸಹಕಾರಿ ಸಂಘದ ವಿಚಾರಣೆ ಇಲ್ಲದೇ ಸದಸ್ಯ ರಿಗೆ ನ್ಯಾಯ ದೊರೆಕಿಲ್ಲ,ಬೇರೆ ಬೇರೆ ಸಹಕಾರಿ ಸಂಘ ಗಳು ಇದೇ ಗತಿ ತಲುಪುವ ಮೊದಲೇ ಸಹಕಾರಿ ಇಲಾಖೆಯ, ಅಧಿಕಾರಿಗಳನ್ನು ಬದಲಾಯಿಸಿ ಕೊಡಿ, ಕೆಲವು ಸಹಕಾರಿ ಸಂಘ ಗಳಲ್ಲಿ ಹಲವಾರು ವರ್ಷ ಗಳಿಂದ ಬೇರು ಬಿಟ್ಟಿರುವ ಲೆಕ್ಕ ಪರಿಶೋದಕರನ್ನು ಬದಲಾಯಿಸಲು ವಾರ್ಷಿಕ ಮಹಾಸಭೆ ಸೂಚಿಸಿದರು ಅವರನ್ನು ಬದಲಾಯಿಸದೆ ಅಧಿಕಾರ ನಡೆಸುತ್ತಿರುವ ಸಹಕಾರಿ ಸಂಘ ಗಳ ಮೇಲೆ ಕಾನೂನು ಕ್ರಮ ಜರುಗಿಸದೆ ಇರುವ ಸಹಕಾರಿ ಇಲಾಖೆಗೆ ಪಾಲಿದೆಯೇ ಎಂದು ಜನ ಕೇಳುವ ಸ್ಥಿತಿಗೆ ಸಹಕಾರಿ ಸಂಘ ಗಳು ತಲುಪಿವೆ.
ತಾಲೂಕಿನಲ್ಲಿ 39 ಹಳ್ಳಿ ಗಳಿಗೆ ಕುಡಿಯುವ ನೀರಿನ ಸಮಸ್ಯೆ ಮುಂದಿನ ದಿನಗಳಲ್ಲಿ ಕಾಡಲಿದೆ, ದಯಮಾಡಿ, ನೀರಾವರಿ ಸಚಿವರನ್ನು ಅಥವಾ ಗೃಹ ಸಚಿವರನ್ನು ಕರೆ ತನ್ನಿ ಎಂದು ಜನರು ಆಗ್ರಹಿಸಿದ್ದಾರೆ.
