Banner Ad

ಅನುಮಾನಾಸ್ಪದ ಸಾವು

ಜೊಯಿಡಾ ತಾಲೂಕಿನ ಮುಡಿಯೆ ಗ್ರಾಮದ ಕುಮಾರಿ ಪ್ರಜಿತಾ ಪ್ರಕಾಶ್ ವೇಳಿಪ( 19 ) ಧಾರವಾಡದ ಕೆ.ಸಿ.ಡಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ಶಿಕ್ಷಣ ಓದುತ್ತಿದ್ದಳು. ಶುಕ್ರವಾರ ಅನುಮಾನ ರೀತಿಯಲ್ಲಿ ಸಾವನ್ನಪ್ಪಿದ್ದಾಳೆ, ಎಂದು ತಿಳಿದು ಬಂದಿದೆ. ಧಾರವಾಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Banner Ad

ಮುಡಿಯೆ ಗ್ರಾಮದ ಕುಮಾರಿ ಪ್ರಜಿತಾ ಪ್ರಕಾಶ್ ವೇಳಿಪ ಪ್ರಾಯ 19 ವರ್ಷ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ಓದುತ್ತಿದ್ದಳು ಸರ್ಕಾರದ ವಸತಿ ನಿಲಯದಲ್ಲಿ ಉಳಿದು ಓದುತಿದ್ದಳು. ಗುರುವಾರ ಅನಾರೋಗ್ಯದಿಂದ ಬಳಲುತ್ತಿದ್ದ ಅವಳು ದವಾಖಾನೆಗೆ ದಾಖಲಾಗಿದ್ದಳು ಆದರೆ ಶನಿವಾರ ಸಂಜೆ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.

ಹತ್ತನೇ ತರಗತಿ ವರೆಗೆ ಜೊಯಿಡಾ ಮೊರಾರ್ಜಿ ವಸತಿ ಶಾಲೆಯಲ್ಲಿ ಪಿಯುಸಿ ಯನ್ನು ಯಲ್ಲಾಪುರದಲ್ಲಿ ಓದಿದ್ದಳು. ಡಿಗ್ರಿ ಶಿಕ್ಷಣ ಧಾರವಾಡ ದ ಕೆ.ಸಿ.ಡಿ ಯಲ್ಲಿ ಓದುತ್ತಿದ್ದಳು.

ತಂದೆ ಪ್ರಕಾಶ್ ವೇಳಿಪ ಮಗಳ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡ ಧಾರವಾಡ ಪೋಲಿಸರು ಮೊಬೈಲ್ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಪಾರದರ್ಶಕ ತನಿಖೆ ಆಗುವಂತೆ ಸ್ಥಳಿಯರು ಆಗ್ರಹಿಸಿದ್ದಾರೆ.

Banner Ad