Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕು ಸೇರಿದಂತೆ ರಾಜ್ಯಾದ್ಯಂತ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳಿಗೆ ಎಪ್ರಿಲ್ 11ರಿಂದ ಮೇ 28 ರವರೆಗೆ ಬೇಸಿಗೆಯ ರಜೆಯು ಇರುತ್ತಿದ್ದು,ಸುಮಾರು 48 ದಿನಗಳ ಕಾಲ ಬೇಸಿಗೆಯ ರಜೆಯ ಮೋಜು,ಮಸ್ತಿಯನ್ನು ಅನುಭವಿಸಲಿದ್ದಾರೆ.

Banner Ad

ಬೇಸಿಗೆಯ ರಜೆಯ ಸಂದರ್ಭದಲ್ಲಿ ಉಪನಯನ, ಮದುವೆ, ಗೃಹಪ್ರವೇಶ,ಜಾತ್ರಾ ಮಹೋತ್ಸವ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಲ್ಲಿ ಯಾವುದೇ ಶಾಲಾ ವಾತಾವರಣದ ಅಳುಕಿಲ್ಲದೇ ಮುಕ್ತವಾಗಿ ಭಾಗವಹಿಸುವ ಅವಕಾಶ ಇರಲಿದೆ. ಅದೇ ರೀತಿಯಾಗಿ ತಮ್ಮ-ತಮ್ಮ ಅಜ್ಜಿ-ತಾತನ, ನೆಂಟರಿಸ್ಟರ, ಸ್ನೇಹಿತರ,ಆಪ್ತರ ಮನೆಗಳಿಗೆ ಹೋಗುವ ಅವಕಾಶ,ಧಾರ್ಮಿಕ ಕ್ಷೇತ್ರಗಳಿಗೆ, ಪ್ರವಾಸಿ ತಾಣಗಳಿಗೂ ಭೇಟಿ ನೀಡುವ ಅವಕಾಶ ಬಳಸಿಕೊಳ್ಳಲಿದ್ದಾರೆ.

ವಿವಿಧ ಸಂಘ ಸಂಸ್ಥೆಗಳು ಮಕ್ಕಳಿಗೆ ಕಂಪ್ಯೂಟರ್ ತರಬೇತಿ,ಸಂಸ್ಕೃತ ಭಾಷಾ ಕಲಿಕೆಯ ಶಿಬಿರ,ಕೋಚಿಂಗ್ ಕ್ಲಾಸ್ ಗಳನ್ನು ನಡೆಸಲಿದ್ದು ಅದರ ಸದುಪಯೋಗ ಮಕ್ಕಳು ಪಡೆಯಬಹುದಾಗಿದೆ. ಈ ಸಂದರ್ಭದಲ್ಲಿ ಮಕ್ಕಳು ಹೋಮ್ ವರ್ಕ್ ಬಗ್ಗೆಯೂ ಗಮನ ಹರಿಸಿ, ವಿಶೇಷವಾಗಿ ಆರೋಗ್ಯದ ಬಗ್ಗೆ ಕಾಳಜಿವಹಿಸಿ, ನೀರಿನ ಮೂಲಗಳಾದ ಹಳ್ಳ-ಕೊಳ್ಳ,ಕೆರೆ,ನದಿ,ಗಿಡ-ಮರ ಹತ್ತುವುದು,ಮೊಬೈಲ್ ಬಳಕೆ ಇತ್ಯಾದಿಗಳಿಂದ ದೂರ ಇರುವುದೇ ಉತ್ತಮ. ಒಟ್ಟಿನಲ್ಲಿ ಮಕ್ಕಳು ಎಚ್ಚರಿಕೆಯನ್ನು ವಹಿಸಿ ಬೇಸಿಗೆಯ ರಜೆಯ ಮಜೆಯನ್ನು ಅನುಭವಿಸಬೇಕಾಗಿದೆ.

Banner Ad