Banner Ad

ಸುದ್ದಿ ಕನ್ನಡ ವಾರ್ತೆ

ಉತ್ತರ ಕನ್ನಡ ಜಿಲ್ಲಾ ಜೋಯಿಡಾ ತಾಲ್ಲೂಕ ಬಿರಚೋಲ ಗ್ರಾಮ, ಕೊಡಥಳ್ಳಿ (ಸೂಳಗೆರಿ) ರಹವಾಸಿಗಳು ಮಾನ್ಯ ಜಿಲ್ಲಾಧಿಕಾರಿಗಳು ಕಾರವಾರ ಉತ್ತರ ಕನ್ನಡ ಇವರಲ್ಲಿ ತಮ್ಮ ಗ್ರಾಮ ಪಂಚಾಯತ್ ಕ್ಷೆತ್ರದ ಮೀಸಲಾತಿ ಬದಲಾಯಿಸಿ ಕೊಡಲು ವಿನಂತಿಸಿ ಕೊಂಡಿದ್ದು ಇರುತ್ತದೆ.

Banner Ad

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ವಿನಂತಿಸಿಕೊಳ್ಳುವುದೇನೆಂದರೆ ಬಿರಬೋಲ ಗ್ರಾಮ, ಕೊಡಥಳ್ಳಿ (ಸೂಳಗೆರಿ) ಗ್ರಾಮ ಉಳವಿ ವಾರ್ಡವಾರು ಪಂಚಾಯತ ಚುನಾವಣೆಯಲ್ಲಿ ಮೀಸಲಾತಿ ಪಂಗಡ ಅನುಸೂಚಿತ ಪಂಗಡ ಮಹಿಳೆ ಮಿಸಲಾತಿ ಸ್ಥಾನ ಬಂದಿರುತ್ತದೆ.

ಬಿರಖೋಲ, ಕೊಡಥಳ್ಳಿ ಗ್ರಾಮದಲ್ಲಿ ಅನೂಸೂಚಿತ ಪಂಗಡ ಮಹಿಳೆ ಯಾರು ಇರುವದಿಲ್ಲ. ಆದ ಕಾರಣ ಮಾನ್ಯರವರು ಇದರ ಬಗ್ಗೆ ಪರಿಶಿಲಿಸಿ ಅನೂಸುಚಿತ ಪಂಗಡ ಬಿಟ್ಟು ಬೇರೆ ಯಾವುದಾದರು ಮೀಸಲಾತಿ ಮಾಡಿಕೊಡಲು ನಾವು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇವೆ.ಎಂದು ಗ್ರಾಮಸ್ತರು ಜಿಲ್ಲಾಧಿಕಾರಿ ಅವರಿಗೆ ತಹಸೀಲ್ದಾರ್ ಮಂಜುನಾಥ್ ಮುನ್ನೊಳ್ಳಿ ಅವರಮೂಲಕ ಮನವಿ ನೀಡಿರುತ್ತಾರೆ.
ಬೀರಕೋಲ್ ಗ್ರಾಮಕ್ಕೆ ನೀಡಿದ ಮೀಸಲಾತಿ ಜನರು ಅಲ್ಲಿ ಇಲ್ಲದ ಕಾರಣ ಯಾವುದೇ ಬೇರೆ ಮೀಸಲಾತಿ ಒದಗಿಸಿಕೊಡಿ ಎಂದು ಗ್ರಾಮಸ್ಥರು ಮನವಿ ನೀಡಿರುತ್ತಾರೆ.

Banner Ad