ಸುದ್ದಿ ಕನ್ನಡ ವಾರ್ತೆ
ಕುಮಟಾ:ತಾಲೂಕಿನ ಯಳವಳ್ಳಿಯಲ್ಲಿ ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದು ತೋಟದಲ್ಲೇ ವಾಸವಿದ್ದ 15 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದು ಮರಳಿ ಕಾಡಿಗೆ ಬಿಟ್ಟ ಘಟನೆ ನಡೆದಿದೆ.
ಯಳವಳ್ಳಿಯ ಲಕ್ಷ್ಮೀನಾರಾಯಣ ಹೆಗಡೆ ಎಂಬುವವರ ಮನೆಯ ತೋಟಕ್ಕೆ ಬಂದಿದ್ದ ಕಾಳಿಂಗ ಒಂದು ವಾರದಿಂದ ಅಲ್ಲಿಯೇ ನೆಲಸಿತ್ತು. ಹೀಗಾಗಿ ಕುಮಟಾದ ಉರುಗ ಪ್ರೇಮಿ ಪವನ್ ನಾಯ್ಕಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಅವರು 15 ಅಡಿ ಉದ್ದದ 11.250 ಕೆಜಿ ಭಾರವಿದ್ದ ಕಾಳಿಂಗ ಸರ್ಪವನ್ನು ಹಿಡಿದು ಸ್ಥಳೀಯ ಕಾಡಿಗೆ ಬಿಟ್ಟಿದ್ದಾರೆ.
ಇನ್ನು ಬೇಸಿಗೆಯಲ್ಲಿ ಕಾಳಿಂಗ ಸರ್ಪದ ಮಿಲನ ಸಮಯವಾಗಿದ್ದು, ಈ ಸಮಯದಲ್ಲಿ ಸಂಗಾತಿ ಹುಡುಕಿ 10 ರಿಂದ 20 ಕಿಲೋಮೀಟರ್ ದೂರದಷ್ಟು ಅರಣ್ಯದಲ್ಲಿ ಸಂಚರಿಸುತ್ತವೆ.
ಹೀಗಾಗಿ ಈ ಕಾಳಿಂಗ ಸರ್ಪವು ಈ ಭಾಗದಲ್ಲಿ ಬಂದಿರುವ ಸಾಧ್ಯತೆಯನ್ನು ಉರಗ ಪ್ರೇಮಿ ಪವನ ಮಾಹಿತಿ ನೀಡಿದರು.
