ಸುದ್ದಿ ಕನ್ನಡ ವಾರ್ತೆ
ಜೋಯಿಡಾ – ಕ್ಷೆತ್ರದ ಎಲ್ಲೆಡೆ ಸ್ವಚ್ಛತಾ ಕಾರ್ಯಕ್ರಮಗಳು ನಡೆಯ ಬೇಕು, ಪರಿಸರ ಸುಂದರ ಮತ್ತು ಸ್ವಚ್ಛ ವಾಗಿರಬೇಕು ಎಂಬ ಉದ್ದೇಶ ದಿಂದ ಶಾಸಕರು ಮತ್ತು ಆಡಳಿತ ಸುಧಾರಣಾ ಸಮೀತಿ ಅಧ್ಯಕ್ಷರು ಆಗಿರುವ ಆರ್ ವಿ ದೇಶಪಾಂಡೆ ಯವರು ಮೂರು ದಿನಗಳ ಕಾಲ ಹಳಿಯಾಳ ದಾಂಡೇಲಿ ಮತ್ತು ಜೋಯಿಡಾ ದ ಎಲ್ಲ ಸ್ಥಳ ಗಳಲ್ಲಿ ಏಕ ಕಾಲಕ್ಕೆ ಸ್ವಚ್ಛತಾ ಅಭಿಯಾನ ನಡೆಯಲಿ ಎಂಬ ಉದ್ದೇಶ ದಿಂದ ಹಮ್ಮಿ ಕೊಂಡ ಸ್ವಚ್ಛತಾ ಅಭಿಯಾನಕ್ಕೆ ಜೋಯಿಡಾ ದಲ್ಲಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು,ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಅವರ ಕನಸಿನಂತೆ ದೇಶವನ್ನು ಸ್ವಚ್ಚವಾಗಿಡಬೇಕು ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಚವಾಗಿ ಇರಬೇಕು ಎಲ್ಲಾ ಜನತೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಚ್ಚತೆಗೆ ಆಧ್ಯತೆ ನೀಡಬೇಕು, ವಿದ್ಯಾರ್ಥಿಗಳಿಗೆ ಈಗಿನಿಂದಲೇ ಸ್ವಚ್ಛತೆಯ ಅರಿವು ಮೂಡಬೇಕು ಎಂದರು
ಅವರು ಜೋಯಿಡಾದ ಶಿವಾಜಿ ವೃತ್ತದ ಬಳಿ ಸ್ವಚ್ಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಸಾರ್ವಜನಿಕರು ಎಲ್ಲಂದರಲ್ಲಿ ಕಸ ಎಸೆಯಬಾರದು, ಜನರಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ಹಮ್ಮೀಕೊಳ್ಳಲಾಗಿದೆ,ಸ್ವಚ್ಚತೆಯಿಂದ ಒಳ್ಳೆಯ ಆರೋಗ್ಯ ಇರುತ್ತದೆ, ಮೊದಲೆಲ್ಲ ಶ್ರಮಾದಾನ ಮಾಡಲಾಗುತ್ತಿತ್ತು,ಅವರವರಊರು,ಹಳ್ಳಿ ಯನ್ನು ಜನರೆ ಸ್ವಚ್ಚ ಮಾಡುತ್ತಿದ್ದರು, ಈಗಿನ ಜನತೆ ಸ್ವಚ್ಚತೆಯನ್ನು ಮರೆತಿದ್ದಾರೆ ಜನತೆಗೆ ಒಳ್ಳೆಯದಕ್ಕೆ ಆಸಕ್ತಿ ಕಡಿಮೆ ಯಾಗಿದೆ ಹಾಗಾಗಬಾರದು ಸಮಾಜವನ್ನು ಸ್ವಚ್ಚವಾಗಿ ಇಡಲು ಎಲ್ಲರು ಕೈಜೋಡಿಸಬೇಕು‌, ಎಲ್ಲಾ ಅಧಿಕಾರಿಗಳು ತಮ್ಮ ಇಲಾಕೆಯ ಕಟ್ಟಡಕ್ಕೆ ಸುಣ್ಣ ಬಣ್ಣ ಹಚ್ಚಿ ಸ್ವಚ್ಚಮಾಡಿ ಮತ್ತು ಇಕ್ಕೆಲಗಳನ್ನು ಸ್ವಚ್ಚವಾಗಿಡಬೇಕು, ಆಯಾ ಗ್ರಾಮ ಪಂಚಾಯತನವರು ತಮ್ಮ ವ್ಯಾಪ್ತಿಯಲ್ಲಿ ಸ್ವಚ್ಚತಾ ಕಾರ್ಯ ಕೈಗೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಜೋಯಿಡಾ ತಹಶಿಲ್ದಾರ ಮಂಜುನಾಥ ಮೊನ್ನೋಳಿ, ಇಓ ಭಾರತಿ ಎಂ, ಜೋಯಿಡಾ ವಲಯ ಅರಣ್ಯಾಧಿಕಾರಿ ಪ್ರವೀಣ ಚಲವಾದಿ, ಸಿ.ಡಿ.ಪಿಓ ಸಿದ್ದಲಿಂಗಪ್ಪ ಕೆ, ಅಧಿಕಾರಿಗಳು ಮತ್ತು ಸಾರ್ವಜನಿಕರು ಸ್ವಚ್ಚತಾ ಕಾರ್ಯದಲ್ಲಿ ಭಾಗವಹಿಸಿದ್ದರು. ನಂದಿಗದ್ದೆ ಗ್ರಾಮ ಪಂಚಾಯತ್ ಮತ್ತು ಅಣಶಿ ಗ್ರಾಮ ಪಂಚಾಯತ ಗಳಲ್ಲಿ ಕೂಡ ಸ್ವಚ್ಛತಾ ಕಾರ್ಯಕ್ರಮ ಯಶಸ್ವಿ ಯಾಗಿ ನಡೆದ ಬಗ್ಗೆ ತಿಳಿದು ಬಂದಿದೆ ತಾಲೂಕಿನ ಎಲ್ಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮೂರು ದಿನಗಳ ಕಾಲ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ