ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಯಾವುದೇ ವಸ್ತು ತಮಗೆ ದಕ್ಕದಿದ್ದಾಗ ಅದನ್ನು ಹಾಳುಕೆಡವಿ ಪರಾರಿಯಾಗುವ ವಿಕೃತ ಮನಸ್ಸಿನ ಕಳ್ಳರ ಬಗ್ಗೆ ನಾವು ಕೇಳಿದ್ದೇವೆ. ಇದೀಗ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಉಮ್ಮಚಗಿಯಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಇಂತಹದ್ದೇ ಘಟನೆಯೊಂದು ನಡೆದಿದೆ.
ಈ ಬ್ಯಾಂಕಿನಲ್ಲಿ ಕಳ್ಳತನ ನಡೆಸಲು ನಿನ್ನೆ ರಾತ್ರಿಯಿಡೀ ಕಳ್ಳರು ಪ್ರಯತ್ನಿಸಿದ್ದು ಅದು ಸಾಧ್ಯವಾಗದಿದ್ದಾಗ ಈ ವಿಕೃತ ಮನಸ್ಸಿನ ಕಳ್ಳರು ಬ್ಯಾಂಕಿಗೇ ಬೆಂಕಿಯಿಟ್ಟ ಘಟನೆ ನಡೆದಿದೆ.
ಉಮ್ಮಚಗಿಯಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಹಿಂಭಾಗದಿಂದ ಕಬ್ಬಿಣದ ಕಿಟಕಿಯನ್ನು ಗ್ಯಾಸ್ ಕಟರ್ ಬಳಸಿ ಕತ್ತರಿಸಿ ಬ್ಯಾಂಕಿನ ಒಳನುಗ್ಗಿ ಬ್ಯಾಂಕನ್ನು ದೋಚುವ ಹುನ್ನಾರ ನಡೆಸಿದ್ದರು.

ಕಳ್ಳರು ಬ್ಯಾಂಕಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಅಷ್ಟರಲ್ಲಿ ಉಮ್ಮಚ್ಗಿ ಗ್ರಾ.ಪಂ.ಅಧ್ಯಕ್ಷ ಕುಪ್ಪಯ್ಯ ಪೂಜಾರಿಯವರು ಬ್ಯಾಂಕ್ ಕಟ್ಟಡದಿಂದ ಹೊಗೆ ಬರುತ್ತಿರುವುದನ್ನು ಗಮನಿಸಿ ಹತ್ತಿರ ಬಂದು ನೋಡುವಷ್ಟರಲ್ಲಿ ಬ್ಯಾಂಕಿನೊಳಗೆ ಬೆಂಕಿ ಉರಿಯುತ್ತಿದೆ. ಅದನ್ನು ಕಂಡ ತಕ್ಷಣ ಸ್ಥಳೀಯ ಕೆಲವು ಯುವಕರನ್ನು ಒಟ್ಟಾಗಿಸಿ ಬ್ಯಾಂಕಿನ ಕಿಟಕಿಯೊಂದರ ಗಾಜನ್ನು ಒಡೆದು ನೀರನ್ನು ಹಾರಿಸುವ ಮೂಲಕ ಬೆಂಕಿಯನ್ನು ನಂತರ ನಂದಿಸುವ ಕಾರ್ಯ ಮಾಡಿದರು. ಅಷ್ಟರಲ್ಲೇ ಬ್ಯಾಂಕಿನ ಪೀಠೋಪಕರಣ,ಕಂಪ್ಯೂಟರ ಗಳು ಬೆಂಕಿಗಾಹುತಿಯಾಗಿತ್ತು.
ಕುಪ್ಪಯ್ಯ ಪೂಜಾರಿ,ಗೋವಿಂದ ಬಸಾಪುರ,ಬಾಬು ಬಿಲ್ಲವ,ರಾಮ ಪೂಜಾರಿ,ಹೂವಿನಂಗಡಿ ಚಂದ್ರು, ಪುಟ್ತಮ್ಮ,ಲಕ್ಷ್ಮೀಕಾಂತ ಪೂಜಾರಿ, ನಾರಾಯಣ ನಾಯ್ಕ, ಸಂತೋಷ ನಾಟೇಕರ್ ಮೊದಲಾದವರು ಈ ಕಾರ್ಯದಲ್ಲಿ ಭಾಗಿಯಾಗಿದ್ದರು.ನಂತರ ಅಗ್ನಶಾಮಕದಳದವರು ಸ್ಥಳಕ್ಕೆ ಆಗಮಿಸಿ ಸಂಪೂರ್ಣ ಬೆಂಕಿ ಆರಿಸಿದರು. ಬ್ಯಾಂಕಿನ ಹಿರಿಯ ಅಧಿಕಾರಿಗಳೂ ಆಗಮಿಸಿದ್ದು, ಬೆಂಕಿಯಿಂದ ಅಪಾರಪ್ರಮಾಣದ ಹಾನಿಯಾಗಿದೆಯೆಂದು ಎಂದಿದ್ದಾರೆ.ಬ್ಯಾಂಕಿನ ಉಧ್ಯೋಗಿ ರಾಘವೇಂದ್ರ ನಾಯ್ಕ ರವರು ಈ ಕುರಿತು ಪೆÇೀಲಿಸ್ ದೂರು ನೀಡಿದ್ದು ಪ್ರಿಂಟರ್, ಕಂಪ್ಯೂಟರ್, ಖುರ್ಚಿ ಸೇರಿದಂತೆ ವಿವಿಧ ಸಲಕರಣೆ ಸೇರಿ 2.10 ಲಕ್ಷ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಯಲ್ಲಾಪುರ ಪೆÇೀಲೀಸರು ತನಿಖೆ ಆರಂಭಿಸಿದ್ದಾರೆ.
