ಸುದ್ಧಿಕನ್ನಡ ವಾರ್ತೆ

ಜೋಯಿಡಾ  :ದಿನಾಂಕ 23- ಮತ್ತು 24-ರಂದು ಹಿಮಾಲಯ ಪದವಿ ಪೂರ್ವ ಕಾಲೇಜು ಅಂಕೋಲದಲ್ಲಿ ನಡೆದ ಜಿಲ್ಲಾ ಮಟ್ಟದ ಪ.ಪೂ ಕಾಲೇಜುಗಳ ಕ್ರೀಡಾ ಕೂಟದಲ್ಲಿ ಬಿ.ಜಿ.ವಿ.ಎಸ್ ಪ.ಪೂ ಕಾಲೇಜು ರಾಮನಗರದ (ಉ.ಕ) ಕ್ರೀಡಾ ಪಟುಗಳು ಕ್ರೀಡೆಯಲ್ಲಿ ಸಾಧನೆಯನ್ನು ಮಾಡಿದ್ದಾರೆ .

ಗುಂಪು ಆಟಗಳಾದ ಟೆನ್ನಿಕಾಯ್ಡ್ ಆಟದಲ್ಲಿ ಬಾಲಕರ ತಂಡ ಪ್ರಥಮ- ದಕ್ಷ ಗೋಸಾವಿ, ಪ್ರತೀಕ ದೇಸಾಯಿ, ಪ್ರವೇಶ ಹರಿಜನ, ಆಯಾನ್ ಪಾಷ, ವಿರಾಜ್ ತಂಡ ಮತ್ತು ಟೆನ್ನಿಕಾಯ್ ಬಾಲಕಿಯರ ತಂಡ ಪ್ರಥಮ ಸ್ಥಾನ -ಪ್ರತೀಕ್ಷಾ ಪಾಟೀಲ್, ರಾಣಿ ಕುಂಬಾರ, ಯೋಹಿತಾ, ಮಿಥಾಲಿ, ಮದುರಾ ತಂಡ, ಈ ಎರಡು ತಂಡಗಳು ರಾಜ್ಯ ಮಟ್ಟದ ಟೆನ್ನಿಕ್ವಾಯ್ಡ್ ಕ್ರೀಡಾಕೂಟಕ್ಕೆ ಆಯ್ಕೆ ಆಗಿದ್ದಾರೆ. ಮತ್ತು ಹಳಿಯಾಳದ ಕ್ರೀಡಾ ವಸತಿ ನಿಲಯದ ಕುಸ್ತಿ ಪಟುಗಳು ಬಾಲಕರ ವಿಭಾಗದಲ್ಲಿ 4 ಬಂಗಾರದ ಪದಕಗಳು, ಪ್ರೀ ಸ್ಟೈಲ್ ನಲ್ಲಿ ಪ್ರಥಮ ಸ್ಥಾನ ಪಡೆದ ಮನೋಜ ಹೊಸಮನಿ-61 ಕೆ.ಜಿ, ಅಮೃತ್ ದುರ್ಗಣ್ಣವರ್-65 ಕೆ.ಜಿ, ಆಯಾನ್ ಬಿ.ಕಕ್ಕೇರಿ-79 ಕೆ.ಜಿ, ಗ್ರೀಕೋ ರೋಮನ್ ನಲ್ಲಿ ಅಬುಬಕ್ಕರ್ ಎಸ್. ನದಾಪ್-60 ಕೆ.ಜಿ. ಮತ್ತು ಬಾಲಕಿಯರ ವಿಭಾಗದಲ್ಲಿ ಒಟ್ಟು 3 ಬಂಗಾರದ ಪದಕ, ಪ್ರಥಮ ಸ್ಥಾನ ಪಡೆದ ಸವಿತಾ ಸಿದ್ದಿ -57 ಕೆ.ಜಿ, ಮನಿಷಾ ಸಿದ್ದಿ -72 ಕೆ.ಜಿ, ಖುಷಿ ಚಂದುಕರ್-76 ಕೆ.ಜಿ, ಒಟ್ಟು 7 ಬಂಗಾರದ ಪದಕ ಪಡೆಯುವ ಮೂಲಕ ಕುಸ್ತಿಯ ಕ್ರೀಡಾ ಪಟುಗಳು ರಾಜ್ಯ ಮಟ್ಟದ ಕುಸ್ತಿ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ..

ಇವರ ಸಾಧನೆಗೆ ಬಾಪೂಜಿ ಗ್ರಾಮೀಣ ವಿಕಾಸ ಸಮಿತಿ ಕಾರವಾರ ಅಧ್ಯಕ್ಷರು ಶ್ರೀಮತಿ ವನಿತಾ ಪ್ರಭಾಕರ ರಾಣೆ, ಶ್ರೀ ಉಲ್ಲಾಸ ನಾಯ್ಕ ಉಪಾಧ್ಯಕ್ಷರು, ಶ್ರೀ ಮಂಜುನಾಥ ಪವಾರ್ ಕಾರ್ಯದರ್ಶಿ, ಶ್ರೀ ಕಿಶೋರ ರಾಣೆ ಜಂಟಿ ಕಾರ್ಯದರ್ಶಿ ಶ್ರೀ ಗಜೇಂದ್ರ ಗಾಂದಲೆ ಹಾಗೂ ಸದಸ್ಯರು, ಕಾಲೇಜಿನ ಪ್ರಾಚಾರ್ಯರು ಶ್ರೀ ಪ್ರೇಮಾನಂದ ಎಸ್.ಪರಬ, ದೈಹಿಕ ಶಿಕ್ಷಣ ಉಪನ್ಯಾಸಕ ಶ್ರೀ ಸಂಜಯ ಜಿ. ಗೌಡ ಹಾಗೂ ಕಾಲೇಜಿನ ಎಲ್ಲಾ ಸಿಬ್ಬಂದಿಗಳು ಶುಭವನ್ನು ಹಾರೈಸಿರುತ್ತಾರೆ.