Banner Ad

ಸುದ್ದಿ ಕನ್ನಡ ವಾರ್ತೆ

ಶಿರಸಿ: ನವದೆಹಲಿಯಲ್ಲಿ ಸಂಸದ
ವಿಶ್ವೇಶ್ವರ ಹೆಗಡೆ ಕಾಗೇರಿ ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ ಸಿಂಗ್ ಅವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ ಕಾರವಾರದ ಸೀಬರ್ಡ್ ನೌಕಾನೆಲೆಯಿಂದ ಉಂಟಾಗಿರುವ ಸಮಸ್ಯೆಯ ಕುರಿತು ಚರ್ಚಿಸಿದರು.

Banner Ad

ಪ್ರಮುಖವಾಗಿ ಬಾಕಿ ಇರುವ ಭೂ ಪರಿಹಾರವನ್ನು ತಕ್ಷಣವೇ ನೀಡುವಂತೆ ಮನವಿ ಮಾಡಿದರು. ಬಾಕಿ ಇರುವ ನಾನಾ ಸಮಸ್ಯೆಗಳ ಕಡತಗಳನ್ನು ಅತಿ ಶೀಘ್ರದಲ್ಲಿ ವಿಲೇವಾರಿ ಮಾಡುವಂತೆ ಮನವರಿಕೆ ಮಾಡಿದರು.
ನೌಕಾ ನೆಲೆಗಾಗಿ ಭೂಮಿ ಕಳೆದುಕೊಂಡವರಿಗೆ ಹಾಗೂ ಸ್ಥಳೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು ಸೀಬರ್ಡ್ ನೌಕನೆಲೆಯಲ್ಲಿ ನಡೆಯುವ ಉದ್ಯೋಗ ಪರೀಕ್ಷಾ ಕೇಂದ್ರವನ್ನು ಕಾರವಾರದಲ್ಲಿಯೇ ಸ್ಥಾಪಿಸಬೇಕೆಂದು ಮನವಿ ನೀಡಿ ಈ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿದರು.

  • ಇದಕ್ಕೆ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿ ಸ್ಪಂದಿಸುವಂತೆ ನಿರ್ದೇಶನ ಮಾಡಿದರು. ಮುಂದಿನ ದಿನಗಳಲ್ಲಿ ಸಮಸ್ಯೆಯುಂಟಾದಲ್ಲಿ ತುರ್ತುಗತಿಯಲ್ಲಿ ಇತ್ಯರ್ಥ ಮಾಡುವುದಾಗಿ ಭರವಸೆ ಕೂಡ ನೀಡಿದರು.
Banner Ad