Banner Ad

ಶಿರಸಿ: ನವ ದೆಹಲಿಯ ರೈಲ್ ಭವನದಲ್ಲಿ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ಕರಾವಳಿ ಹಾಗೂ ಚಿಕ್ಕಮಗಳೂರು ರೈಲ್ವೇ ಸೇವೆಗಳ ಕುರಿತು ಬಹು ಮುಖ್ಯ ಕ್ರಮಗಳ ಬಗ್ಗೆ ವಿಸ್ತಾರವಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಚರ್ಚೆ ನಡೆಸಿದರು‌.

ಕೊಂಕಣ ರೈಲ್ವೆ ವಿಲೀನದ ಕುರಿತು ಮುಂದಿನ ಹಂತದ ಬಗ್ಗೆ ಸಚಿವರ ಜೊತೆ ಚರ್ಚೆ ಮಾಡಿದರು. ಪಾಲುದಾರಿಕಾ ರಾಜ್ಯ ಸರಕಾರಗಳಾದ ಕರ್ನಾಟಕ, ಕೇರಳ, ಗೋವಾ, ಮಹಾರಾಷ್ಟ್ರ ಸರಕಾರಗಳ ಶೇರು ಮರು ಖರೀದಿಗೆ ಕಾರ್ಯಪ್ರವ್ರತ್ತರಾಗಲು ಮನವಿ ಮಾಡಿದರು.

Banner Ad

ಕರಾವಳಿಯ ಕಾರವಾರ, ಕುಂದಾಪುರ, ಉಡುಪಿ ಮಂಗಳೂರು ನಡುವೆ ಜನರ ಬಯಕೆಯಂತೆ ರೈಲು ಓಡಿಸಲು ತೀವ್ರ ಅಡ್ಡಿ ಉಂಟು ಮಾಡಿರುವ ಸಕಲೇಶಪುರ ಘಾಟ್ ಸಮಸ್ಯೆಗೆ ಈಗಾಗಲೆ ಪರಿಣಿತರಿಂದ ತಿಳಿಸಲ್ಪಟ್ಟ ಪರಿಹಾರವನ್ನು ಸಚಿವರ ಎದುರು ಪ್ರಸ್ತಾಪ‌ ಮಾಡಿದರು. ಸಕಲೇಶಪುರ ಸುಬ್ರಮಣ್ಯ ನಡುವೆ ಹಳಿ ದ್ವಿಗುಣ, ಸುಬ್ರಮಣ್ಯ ಪಡೀಲ್ ಮಾರ್ಗದ ವೇಗ ಹೆಚ್ಚಳ ಹಾಗೂ ಘಾಟ್ ಭಾಗದ ಹರೇ ಬೆಟ್ಟ ನಿಲ್ದಾಣವನ್ನು ಕ್ರಾಸಿಂಗ್ ನಿಲ್ದಾಣವಾಗಿ ಬಳಸುವ ಕುರಿತು ವಿಸ್ತಾರವಾಗಿ ಚರ್ಚಿಸಿದರು.

ಘಾಟ್ ಮಧ್ಯ ಭಾಗದ ಹರೇ ಬೆಟ್ಟ ಕ್ರಾಸಿಂಗ್ ನಿಲ್ದಾಣವಾಗಿ ಅರಂಭವಾದರೆ ಬೆಂಗಳೂರು ಮಂಗಳೂರು ಕುಂದಾಪುರ ಕಾರವಾರ ನಡುವೆ ಹೊಸ ರೈಲು ಹಾಗೂ ಹೆಚ್ಚು ಬೋಗಿ ಅಳವಡಿಸಿ ಉತ್ತಮ ಸಮಯ ಪಟ್ಟಿ ರಚಿಸಲು ಸಾಧ್ಯವಾಗುತ್ತದೆ.

ಕಾರವಾರ ಕುಂದಾಪುರ ಬೆಂಗಳೂರು ನಡುವೆ ಪಂಚಗಂಗಾ ಮಾದರಿಯಲ್ಲಿಯೆ ಆದರೆ ತಡವಾಗಿ ಬೆಂಗಳೂರಿನಿಂದ ಹೊರಡುವ ಹೊಸ ಪಡೀಲ್ ಬೈಪಾಸ್ ನೇರ ರೈಲಿಗೆ ಸಚಿವರಿಗೆ ಮನವಿ ಮಾಡಲಾಗಿದೆ. ಚಿಕ್ಕಮಗಳೂರು ತಿರುಪತಿ ಬೆಂಗಳೂರು ಮಾರ್ಗದ ಮೂಲಕ ಆರಂಭಿಸಲೂ ಮನವಿಯನ್ನೂ ಮಾಡಿದರು.

ಬೆಂಗಳೂರು ಮುರುಡೇಶ್ವರ ರೈಲಿನ ವಾಸ್ಕೋ ವಿಸ್ತರಣೆ ಮತ್ತು ಅದರಿಂದ ಕರಾವಳಿಗೆ ಸಿಗುವ ಗೋವಾ ವಿಮಾನ ನಿಲ್ದಾಣ ಹಾಗೂ ವೇಲಾಂಕಣಿ ,ತಿರುಪತಿ,ಉತ್ತರ ಕರ್ನಾಟಕ ಸಂಪರ್ಕದ ಬಗ್ಗೆ, ರೈಲು ಸಂಖ್ಯೆ 16585 ಎಸ್ಎಂವಿಪಿ ಮುರ್ಡೇಶ್ವರ ಎಕ್ಸ ಪ್ರೆಸನ್ನು ವಾಸ್ಕೋವರೆಗೆ ವಿಸ್ತರಿಸಲು ಹಾಗೂ ರೈಲು ಸಂಖ್ಯೆ 17317/18 ಎಕ್ಸಪ್ರೆಸ್ ನ್ನು ಕಾರವಾರದವರೆಗೆ ವಿಸ್ತರಿಸಲು ಮತ್ತು ರೈಲು ಸಂಖ್ಯೆ 17317/18 ಖಾನಾಪುರ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಮಾಡುವಂತೆ ಈ ಸಂದರ್ಭದಲ್ಲಿ ಹುಬ್ಬಳ್ಳಿ ಅಂಕೋಲಾ , ಹಾಗೂ ತಾಳಗುಪ್ಪ ಹುಬ್ಬಳ್ಳಿ ರೈಲ್ವೆ ಮಾರ್ಗಗಳ ಕುರಿತು ವಿನಂತಿಸಲಾಯಿತು. ಇವುಗಳಿಗೆ ರೈಲ್ವೆ ಸಚಿವರು ಉತ್ತಮ ಸ್ಪಂದನೆ ನೀಡಿ ಆಶ್ವಾಸನೆ ನೀಡಿದರು.

ಈ ವೇಳೆ‌ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಮಂಗಳೂರು ಸಂಸದರಾದ ಕಾಪ್ಟನ್ ಚೌಟ, ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎಮಂಜುನಾಥ್ ಜತೆಗಿದ್ದರು.

Banner Ad