ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: SCST ಕುಟುಂಬಕ್ಕೆ ನೀಡಬೇಕಾದ ಅನುದಾನವನ್ನು ದುರ್ಬಳಕ್ಕೆ ಮಾಡಲಾಗಿದ್ದು, ದೇಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಅವ್ಯವಹಾರ ನಡೆದಿದೆ, ಸೂಕ್ತ ತನಿಖೆಯಾಗಬೇಕೆಂದು ದೇಹಳ್ಳಿಯ ಸಾಮಾಜಿಕ ಕಾರ್ಯಕರ್ತ ನಾಗರಾಜ್ ಭಟ್ ಚಾಪೇತೋಟ ಆಘ್ರಹಿಸಿದ್ದಾರೆ.

ಈ ಕುರಿತು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು- ದೇಹಳ್ಳಿ ಪಂಚಾಯತಿಯ  SCST ಫಂಡ ದುರ್ಬಳಕೆಗೆ ಸಂಬಂಧಿಸಿದಂತೆ 24/09/2024 ರಂದು ಮಾಹಿತಿ ಹಕ್ಕಿನಡಿ ಕೇಳಲಾಗಿತ್ತು, ಮಾಹಿತಿ ನೀಡಿಲ್ಲ. ಒಂದು ತಿಂಗಳ ನಂತರ ಪ್ರಥಮ ಮೇಲ್ಮನವಿಯನ್ನೂ ನೀಡಲಾಯಿತು. ಗ್ರಾಮ ಪಂಚಾಯತ ನಿಂದ 1,30,000 ರೂಗಳ ಕಂಪ್ಯೂಟರ್ ಬಿಲ್ ಮಾತ್ರ ನೀಡಲಾಗಿದೆ. ಆಯಾ ಫಲಾನುಭವಿಗಳಿಗೆ ನೀಡಿದ ಪೂರ್ಣ ಮಾಹಿತಿ ಕೇಳಿದ್ದೆ ಆದರೆ ಇದುವರೆಗೂ ನೀಡಿಲ್ಲ ಎಂದು ನಾಗರಾಜ್ ಭಟ್ ಚಾಪೇತೋಟ ಹೇಳಿದ್ದಾರೆ.

ಈ ಕುರಿತಂತೆ ಯಲ್ಲಾಪುರ ತಾಲೂಕಾ ಪಂಚಾಯತಗೆ 07/07/2025 ರಂದು ಮಾಹಿತಿ ಪೂರೈಸಲು ಕೇಳಿದ್ದೆ. ಆದರೆ ಈ ಕುರಿತ ಮಾಹಿತಿಯನ್ನು ನೀಡಲು ಪಿಡಿಒ ಗೆ ಸೂಚಿಸಿದ್ದರು. ಆದರೆ ಪಿಡಿಒ ನಿಂದ ಯಾವುದೇ ಮಾಹಿತಿ ನೀಡಿಲ್ಲ. ಪಂಚಾಯತಿಗೆ ಬಂದಿದ್ದ ಎಸ್ ಸಿ ಎಸ್ ಟಿ ಫಂಡ ದುರ್ಬಳಕೆಯ ಅವ್ಯವಹಾರ ನಡೆದಿದೆ. ಇದರಲ್ಲಿ ಮೇಲಧಿಕಾರಿಗಳು ಮತ್ತು ಪ್ರಮುಖರು ಭಾಗಿಯಾಗಿರುವ ಶಂಕೆ ವ್ಯಕ್ತವಾಗುತ್ತಿದ್ದು ಸೂಕ್ತ ತನಿಖಾ ಕಾರ್ಯ ಕೈಗೊಳ್ಳಬೇಕಿದೆ. ಇಲ್ಲವಾದಲ್ಲಿ ಲೋಕಾಯುಕ್ತದ ಮೊರೆ ಹೋಗುವುದು ಅನಿವಾರ್ಯವಾಗಲಿದೆ ಎಂದು ನಾಗರಾಜ್ ಭಟ್ ಚಾಪೇತೋಟ ಹೇಳಿಕೆ ನೀಡಿದ್ದಾರೆ.