ಸುದ್ದಿ ಕನ್ನಡ ವಾರ್ತೆ
ಬೆಂಗಳೂರು- ಬಸವ ಸಮಿತಿಯ ಸಂಸ್ಥಾಪಕರು ಹಾಗೂ ಏಕೈಕ ಕನ್ನಡಿಗ ರಾಷ್ಟ್ರಪತಿಗಳಾದ ಸನ್ಮಾನ್ಯ ಡಾ. ಬಿ.ಡಿ. ಜತ್ತಿಯವರ 114 ನೇ ಜಯಂತೋತ್ಸವ ಹಾಗೂ ಬಸವ ಸಮಿತಿಯ 62 ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಬೆಂಗಳೂರಿನ ಬಸವ ಸಮಿತಿಯ ಅನುಭವ ಮಂಟಪದಲ್ಲಿ ” ಬಸವ ಅಂತರರಾಷ್ಟ್ರೀಯ ಮಾಹಿತಿ ಕೇಂದ್ರ” ಉದ್ಘಾಟಿಸಿ,ದಿವ್ಯ ಸಾನಿಧ್ಯ ವಹಿಸಿದ್ದ ಸುತ್ತೂರು ಶ್ರೀಕ್ಷೇತ್ರ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಸಾನಿಧ್ಯ ವಹಿಸಿದ್ದ ಬೇಲಿಮಠದ ಪೂಜ್ಯಶ್ರೀ ಶಿವರುದ್ರ ಮಹಾಸ್ವಾಮಿಗಳು, *ದಾಸೋಹ ರತ್ನ ಪ್ರಶಸ್ತಿ* ಸ್ವೀಕರಿಸಲು ಆಗಮಿಸಿದ One World One Family Misson, ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯ ಮತ್ತು ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಂಸ್ಥಾಪಕರಾದ *ಸದ್ಗುರು ಶ್ರೀ ಮಧುಸೂದನ ಸಾಯಿ* ಬಸವ ಸಮಿತಿಯ ಅಧ್ಯಕ್ಷರಾದ ಡಾ. ಅರವಿಂದ ಬಸಪ್ಪ ಜತ್ತಿ ಅವರು *ಮಹಾನ್ ದಾರ್ಶನಿಕ ಬಸವಣ್ಣನವರ ಪ್ರತಿಮೆಗೆ* ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಬಸವ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಹನುಮಂತ ರೆಡ್ಡಿ ಮುದ್ನಾಳ,ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಗಿರೀಶ ದಿಬ್ಬೂರ, ಜಂಟಿ ಕಾರ್ಯದರ್ಶಿಗಳಾದ ಶ್ರೀ ಸುನಿಲಕುಮಾರ ರಗಟೆ,ಹಿರಿಯ ನಿರ್ದೇಶಕರು, ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಶ್ರೀ ಮೋಹನ ಬಸನಗೌಡ ಪಾಟೀಲ, ಆಡಳಿತ ನಿರ್ದೇಶಕರಾದ ಶ್ರೀ ನಂಜಪ್ಪ ಅವರು ಉಪಸ್ಥಿತರಿದ್ದರು.
ಸದ್ಗುರು ಶ್ರೀ ಮಧುಸೂದನ ಸಾಯಿ ಅವರಿಂದ ಬಸವಣ್ಣನವರ ಪ್ರತಿಮೆಗೆ ಗೌರವ
