ಸುದ್ದಿ ಕನ್ನಡ ವಾರ್ತೆ
ಶಿರಸಿ: ಇಲ್ಲಿನ ಗಣೇಶ ನಗರದ ವೇದ ವೆಲ್ನೇಸ್ ಸೆಂಟರ್ ನಿಸರ್ಗ ಮನೆಯ ಮುಖ್ಯ ವೈದ್ಯಾಧಿಕಾರಿ, ಪ್ರಸಿದ್ಧ ವೈದ್ಯ ಬರಹಗಾರ ಡಾ. ವೆಂಕಟರಮಣ ಹೆಗಡೆ ಅವರಿಗೆ ಅಂತರಾಷ್ಟ್ರೀಯ ಮಟ್ಟದ ವಿಶ್ವ ಆಯುರ್ವೇದ ಸಮ್ಮೇಳನದಲ್ಲಿ ಸಮಾನ ಗೌರವ ಸನ್ಮಾನ ಪ್ರದಾನ ಮಾಡಲಾಯಿತು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಆರಂಭಗೊಂಡವಿಶ್ವ ಆಯುರ್ವೇದ ಸಮ್ಮೇಳನದಲ್ಲಿ ವೆಂಕಟರಮಣ ಹೆಗಡೆ ಅವರಿಗೆ
ಡಾ. ಗಿರಿಧರ ಕಜೆ, ಡಾ.ಮಲ್ಲೆಪುರಂ ವೆಂಕಟೇಶ ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ ಡಾ. ಸಿ.ಎನ್.ಮಂಜುನಾಥ, ಡಾ. ಜಿ.ಸೆಂಥಿವಾಲ್, ಡಾ.ಬಿ.ಟಿ.ರುದ್ರೇಶ, ದೊರ್ಜಿ ರೊ್ತನ್ ನೆಶರ್, ಡಾ. ಮಂಜುಳಾ ಎಸ್. ಇತರರು ಇದ್ದರು.
