ಸುದ್ದಿ ಕನ್ನಡ ವಾರ್ತೆ
ರಾಜ್ಯ ಮಟ್ಟದ ಟೆನ್ನಿಕ್ವಾಯಿಟನಲ್ಲಿ ತೃತೀಯ ಸ್ಥಾನ.
ಗದಗ ಜಿಲ್ಲೆಯಲ್ಲಿ ನಡೆದ ರಾಜ್ಯ ಮಟ್ಟದ ಪ.ಪೂ ಕಾಲೇಜುಗಳ ಟೆನ್ನಿಕ್ವೈಟ್ ಪಂದ್ಯಾವಳಿಯಲ್ಲಿ ಬಿ.ಜಿ.ವಿ.ಎಸ್ ಪ.ಪೂ ಕಾಲೇಜು ರಾಮನಗರದ (ಉ.ಕ) ಬಾಲಕರ ತಂಡ ತೃತೀಯ ಸ್ಥಾನ ಪಡೆದು ಸಾಧನೆ ಮಾಡಿದೆ..ತಂಡದ ನಾಯಕ ದಕ್ಷ ಗೋಸಾವಿ , ಪ್ರತೀಕ್ ದೇಸಾಯಿ,ಪ್ರವೇಶ ಹರಿಜನ ತಂಡ.ನಮ್ಮ ಕಾಲೇಜಿಗೆ , ಉತ್ತರ ಕನ್ನಡ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.
ಇವರ ಸಾಧನೆಗೆ ಬಾಪೂಜಿ ಗ್ರಾಮೀಣ ವಿಕಾಸ ಸಮಿತಿ ಕಾರವಾರ ಅಧ್ಯಕ್ಷರು ಶ್ರೀಮತಿ ವನಿತಾ ಪ್ರಭಾಕರ ರಾಣೆ, ಶ್ರೀ ಉಲ್ಲಾಸ ನಾಯ್ಕ ಉಪಾಧ್ಯಕ್ಷರು, ಶ್ರೀ ಮಂಜುನಾಥ ಪವಾರ್ ಕಾರ್ಯದರ್ಶಿ, ಶ್ರೀ ಕಿಶೋರ ರಾಣೆ ಜಂಟಿ ಕಾರ್ಯದರ್ಶಿ. ಶ್ರೀ ಗಜೇಂದ್ರ ಗಾಂದಲೆ ಹಾಗೂ ಸದಸ್ಯರು, ಕಾಲೇಜಿನ ಪ್ರಾಚಾರ್ಯರು ಶ್ರೀ ಪ್ರೇಮಾನಂದ ಎಸ್.ಪರಬ, ದೈಹಿಕ ಶಿಕ್ಷಣ ಉಪನ್ಯಾಸಕ ಶ್ರೀ ಸಂಜಯ ಜಿ. ಗೌಡ ಹಾಗೂ ಕಾಲೇಜಿನ ಎಲ್ಲಾ ಸಿಬ್ಬಂದಿಗಳು ಶುಭವನ್ನು ಹಾರೈಸಿರುತ್ತಾರೆ.
