Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ ದ ರಾಮನಗರ ದಲ್ಲಿ ಪಾದುಕಾ ದರ್ಶನ ತಾಲೂಕಿನ ಪ್ರಮುಖ ಕೇಂದ್ರ ರಾಮನಗರದಲ್ಲಿ ಜಗದ್ಗುರು ನರೇಂದ್ರ ಮಹಾರಾಜರ ಪಾದುಕಾ ದರ್ಶನ ಕಾರ್ಯಕ್ರಮ ವನ್ನು ಇದೇ ಬರುವ ದಿನಾಂಕ 20 ರ ಮಂಗಳವಾರ ಹಮ್ಮಿಕೊಳ್ಳ ಲಾಗಿದೆ. ಜಗದ್ಗುರು ರಾಮಾನಂದಾಚಾರ್ಯ ನರೇಂದ್ರಾಚಾರ್ಯ ದಕ್ಷಿಣ ಪೀಠ ನಾಣಿಜ್ ರವರ ಪಾದುಕಾ ದರ್ಶನಕ್ಕೆ ತಾಲೂಕಿನ ಭಕ್ತರು ಕಾಯುತ್ತಿದ್ದಾರೆ. ಆ ಕಾರಣಕ್ಕೆ ಸಂಕ್ರಮಣ ದ ಶುಭ ಸಂದರ್ಭದಲ್ಲಿ ದಿನಾಂಕ 20 ಮಂಗಳವಾರ ದಿನ ಬೆಳಿಗ್ಗೆ 10 ಘಂಟೆಗೆ ರಾಮನಗರ ಕ್ಕೆ ಶ್ರೀ ಗಳ ಪಾದುಕೆ ಬರಲಿದೆ.

Banner Ad

ಈ ಬಗ್ಗೆ ಕಾರ್ಯಕರ್ತರು ಬಿರುಸಿನ ಸಿದ್ಧತೆ ಮಾಡುತ್ತಿದ್ದಾರೆ. ದಿನಾಂಕ 20 ರಂದು ಪಾದುಕೆ ಆಗಮನದ ನಂತರ ಸಾಮಾಜಿಕ ಉಪಕ್ರಮ, ಗುರುಪೂಜೆ, ಆರತಿ ಸಮಾರಂಭ,ಪ್ರವಚನ, ಉಪಾಸಕ ದೀಕ್ಷಾ, ದರ್ಶನ, ಪುಷ್ಪ ವೃಷ್ಟಿ, ಕಾರ್ಯಕ್ರಮ ಗಳು ನಡೆಯಲಿದೆ. ತಾವು ತಮ್ಮ ಸಹ ಕುಟುಂಬ, ಪಾರಿವಾರದ ಸಮೇತ ಬಂದು ಪಾದುಕಾ ಮತ್ತು ಗುರುಪೂಜನ ಕಾರ್ಯಕ್ರಮ ಕ್ಕೆ ಸಾಕ್ಷಿ ಯಾಗ ಬೇಕೆಂದು ಸಂಘಟಕರು ವಿನಂತಿಸಿದ್ದಾರೆ. ಕಾರ್ಯಕ್ರಮ ದ ಸಿದ್ಧತೆಗಳು ರಾಮನಗರದ ಶ್ರೀ ರಾಮಲಿಂಗ ದೇವಸ್ಥಾನ ದ ಆವಾರದಲ್ಲಿ ಬಿರುಸಿನಿಂದ ನಡೆಯುತ್ತಿದೆ.

ಎಂದು ಸಂಘಟನೆ ಯಲ್ಲಿರುವ ಸಂದೀಪ ನಗರಿ ಮಾಹಿತಿ ನೀಡಿದ್ದಾರೆ. ಸಾವಿರಾರು ಜನರು ಭಾಗವಹಿಸುವ ಕಾರ್ಯಕ್ರಮ ಶಾಂತಿಯುತ ವಾಗಿ ನಡೆಯಲಿದೆ ಎಂದು ತಿಳಿಸಿದ್ದಾರೆ.

Banner Ad