ಶಿರಸಿ: ಕಣ್ಣು ಮುಚ್ಚಿ ಜಗತ್ತಿನ ನಕಾಶೆ ಜೋಡಿಸುವ‌ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡನಲ್ಲಿ  ಶಿರಸಿ ತಾಲೂಕಿನ ಮೂಲದ ಬಾಲಕನೋರ್ವ ದಾಖಲೆ‌ ಮಾಡಿದ್ದಾನೆ.
                ಮೂಲತಃ ತಾಲೂಕಿನ‌ ಮಂಡೇಮನೆ ಪ್ರದೀಪ ಹೆಗಡೆ ಮತ್ತು ಅನುರಾಧಾ ಹೆಗಡೆ ಅವರ ಮಗ ಏಳೂವರೆ ವರ್ಷದ ನಿಶ್ಚಿತ ಹೆಗಡೆ ಈ  ಸಾಧನೆಯಿಂದ ಹೊಸ ದಾಖಲೆ ನಿರ್ಮಿಸಿದ್ದಾರೆ. ೭ ನಿಮಿಷದ ೫೮ ಸೆಕೆಂದಿನಲ್ಲಿ ವಿವಿಧ ದೇಶಗಳ ೭೭ ತುಣಕುಗಳನ್ನು ಜೋಡಿಸಿದ್ದಾನೆ. ಈತ ಪ್ರಸ್ತುತ ಬೆಂಗಳೂರಿ‌ನಲ್ಲಿ‌ ನೆಲೆಸಿದ್ದಾನೆ.