ಸುದ್ಧಿಕನ್ನಡ ವಾರ್ತೆ
ಬೆಂಗಳೂರು: ಕಲರ್ಸ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್, (BIG BOSS KANNADA) ಕನ್ನಡಿಗರು ಕಾತುರದಿಂದ ಕಾಯುತ್ತಿರುವ ಬಿಗ್ ಬಾಸ್ ಸೀಜನ್ 13 ಕ್ಕೆ ಇದೀಗ ಮುಹೂರ್ತ ಫಿಕ್ಸ ಆಗಿದೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (KICCHA SUDEEPA) ರವರ ಸಮ್ಮುಖದಲ್ಲಿ ಬಿಗ್ ಬಾಸ್ ಸೀಜನ್ 13 ರ ಪ್ರೋಮೋ ಬಿಡುಗಡೆಯಾಗಿದ್ದು, ಬರುವ ಸಪ್ಟೆಂಬರ್ 5 ರಿಂದ ಶೋ ಆರಂಭವಾಗಲಿದೆ ಎಂದು ಅಧೀಕೃತವಾಗಿ ಘೋಷಿಸಲಾಗಿದೆ. ಬಿಗ್ ಬಾಸ್ ಪೋಮೋ ಬಿಡುಗಡೆಗೊಂಡ ಕೆಲವೇ ನಿಮಿಷದಲ್ಲಿ ಈ ಸುದ್ಧಿ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ವೈರಲ್ ಆಗಿ ಸದ್ಧುಮಾಡುತ್ತಿದೆ.
ಬಿಗ್ ಬಾಸ್ ಸೀಜನ್ 13 ಹೊಸ ವಿನ್ಯಾಸದ ಮನೆ, ವಿಶೇಷ ಟಾಸ್ಕ, ರೋಚಕ ಮನೋರಂಜನೆಯೊಂದಿಗೆ ಈ ಸೀಜನ್ ಅಧ್ಧೂರಿಯಾಗಿ ನಡೆಸಲು ಆಯೋಜಕರು ಸಜ್ಜಾಗಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್ ಸೀಜನ್ 13 ರ ಪ್ರೋಮೋ ದಲ್ಲಿ ನಟ ಕಿಚ್ಚ ಸುದೀಪ್ ರವರು ಕಪ್ಪು ಬಣ್ಣದ ಸ್ಟೈಲೀಶ್ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ” ಕರ್ನಾಟಕದ ಜನ ಯಾರಿಗೂ ಕಾಯೋದಿಲ್ಲ, ಆದರೆ ವರ್ಷಕ್ಕೆ ಒಂದು ಸಲ ಕಾಯ್ತಾರೆ, ಒಂದೇ ಮನೆ, ಒಂದು ಅವಕಾಶ, ಕೋಟಿ ಕನಸುಗಳು….ಮತ್ತೆ ಶುರು ಮಾಡೋಣ್ವಾ…?ಎಂದು ಸುದೀಪ್ ಹೇಳಿರುವ ಡೈಲಾಗ್ ಎಲ್ಲರ ಗಮನ ಸೆಳೆದಿದೆ.
ಇದೀಗ ಪ್ರಸಕ್ತ ಸೀಜನ್ 13 ರಲ್ಲಿ ಯಾವ್ಯಾಯ ಸೆಲೆಬ್ರಿಟಿಗಳು ಹಾಗೂ ಸೋಶಿಲ್ ಮೀಡಿಯಾ ಸ್ಟಾರ್ ಗಳು ಎಂಟ್ರಿ ಕೊಡ್ತಾರೆ ಎಂಬ ಕುತೀಹಲ ಕನ್ನಡಿಗರಲ್ಲಿ ಮನೆ ಮಾಡಿದೆ.
