ಸುದ್ದಿ ಕನ್ನಡ ವಾರ್ತೆ
ಬೈಲಹೊಂಗಲ- ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಬೈಲವಾಡ ಗ್ರಾಮದ ಗಣ್ಯ ಮನೆತನದ ಪೂಜ್ಯನೀಯ,ಶತಾಯುಷಿ,ಶರಣೆ ಶಿವಬಸವ್ವ ಗದಿಗೆಪ್ಪಗೌಡ ಪಾಟೀಲ (105)ಅವರು ಶುಕ್ರವಾರ ಲಿಂಗೈಕ್ಯರಾದರು. ಲಿಂಗೈಕ್ಯ ಸಂಸ್ಮರಣೆ ಇಂದು ಬೈಲವಾಡ ಗ್ರಾಮದ ಸ್ವಗೃಹದಲ್ಲಿ ಅವರ ಮಕ್ಕಳು,ಮೊಮ್ಮಕ್ಕಳು,ಗಿರಿಮೊಮ್ಮಕ್ಕಳು ಮತ್ತು ಪಾಟೀಲ ಬಂಧುಗಳು ನೆರವೇರಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಶ್ರೀ ಮೋಹನ ಬಸನಗೌಡ ಪಾಟೀಲ, ಕಿತ್ತೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಸ್.ಬಿ.ದಳವಾಯಿ ಅವರು ಸಂಸ್ಮರಣೆಯಲ್ಲಿ ಭಾಗವಹಿಸಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಿವಬಸವ್ವ ಅವರ ಪುತ್ರಿ ಕದಳಿ ವೇದಿಕೆಯ ಜಿಲ್ಲಾಧ್ಯಕ್ಷರು ಮತ್ತು ಬೈಲಹೊಂಗಲ ಪತ್ರಿ ಬಸವ ನಗರ ಅನುಭವ ಮಂಟಪದ ಅಧ್ಯಕ್ಷರಾದ ಶ್ರೀಮತಿ ಪ್ರೇಮಕ್ಕ ಗಂಗಾಧರ ಅಂಗಡಿ, ಪುತ್ರ ಗಣ್ಯ ವರ್ತಕರಾದ ಶ್ರೀ ನಾಗನಗೌಡ ಗದಿಗೆಪ್ಪಗೌಡ ಪಾಟೀಲ ಉಪಸ್ಥಿತರಿದ್ದರು.
