ಸುದ್ಧಿಕನ್ನಡ ವಾರ್ತೆ
ಬೆಂಗಳೂರು: ಹ್ಯಾಟ್ರಿಕ್ ಹೀರೊ ನಶಿವರಾಜಕುಮಾರ್ ರವರಿಗೆ ಪ್ಲೋರಿಡಾದ ಮಿಯಾಮಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಸತತ ಆರು ಗಂಟೆಗಳ ಕಾಲ ವೈದ್ಯರು ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ.

ಭಾರತ ಮೂಲದ ಹಿರೀಯ ವೈದ್ಯರಾದ ಡಾ.ಮುರುಗೇಶ್ ರವರ ನೇತ್ರತ್ವದ ವೈದ್ಯ ತಂಡ ಭಾರತೀಯ ಕಾಲಮಾನ ಮಂಡಳವಾರ ರಾತ್ರಿ 11.30 ರ ಸುಮಾರು ಶಸ್ತ್ರಚಿಕಿತ್ಸೆ ಪೂರ್ಣಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಆಸ್ಪತ್ರೆಯಲ್ಲಿ ಶಿವಣ್ಣನೊಂದಿಗೆ ಪತ್ನಿ ಗೀತಾ, ಪುತ್ರಿ ನಿವೇದಿತಾ, ಬಾಮೈದ ಮಧುಬಂಗಾರಪ್ಪ ರವರು ಶಿವಣ್ಣನೊಂದಿಗಿದ್ದಾರೆ. ಇದೇ ಆಸ್ಪತ್ರೆಯಲ್ಲಿ ಇನ್ನೊಂದು ವಾರ ಚಿಕಿತ್ಸೆ ಮುಂದುವರೆಯಲಿದೆ ಎನ್ನಲಾಗಿದೆ. ಅಮೇರಿಕದಿಂದ ಜನವರಿ 26 ರಂದು ಶಿವಣ್ಣ ಭಾರತಕ್ಕೆ ಮರಳಲಿದ್ದಾರೆ ಎನ್ನಲಾಗಿದೆ.