ಸುದ್ದಿ ಕನ್ನಡ ವಾರ್ತೆ
ಚಿಕ್ಕೋಡಿ:ಕೌಟುಂಬಿಕ ಕಲಹ ಹಿನ್ನಲೇಯಲ್ಲಿ ಪತ್ನಿ ನೇಣಿಗೆ ಶರಣಾದ ಘಟನೆ ಮಂಗಳವಾರ ತಾಲೂಕಿನ ನಾಗರಾಳ ಗ್ರಾಮದಲ್ಲಿ ನಡೆದಿದೆ.
ಮೃತಳನ್ನು ನಾಗರಾಳ ಗ್ರಾಮದ ಉಮಾಶ್ರೀ ಲಗಮಣ್ಣಾ ಹೆಗ್ಗಣ್ಣವರ(23) ಎಂದು ಗುರುತಿಸಲಾಗಿದೆ.ಪತ್ನಿ ಮೃತಪಟ್ಟಿರುವ ಹಿನ್ನಲೇಯಲ್ಲಿ ಪತಿ ಲಗಮಣ್ಣ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಚಿಕ್ಕೋಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಒಂದೂವರೆ ವರ್ಷದ ಹಿಂದೆಯಷ್ಟೆ ಉಮಾಶ್ರೀ ಹಾಗೂ ಲಗಮಣ್ಣಾ ಪ್ರೀತಿಸಿ ವಿವಾಹವಾಗಿದ್ದರು.ಕೆಲವು ದಿನಗಳಿಂದ ಮನೆಯಲ್ಲಿ ಪತಿ-ಪತ್ನಿ ನಡುವೆ ಕಲಹ ನಡೆತ್ತಿತ್ತು.ಅದು ವಿಕೋಪಕ್ಕೆ ಹೋಗಿ ಸಾವಿಗೆ ಶರಣಾಗಿದ್ದಾಳೆ ಎಂದು ಪೋಲಿಸರು ತಿಳಿಸಿದ್ದಾರೆ.ಸದಲಗಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
