Banner Ad

ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜ್ಯಾದ್ಯಂತ ಮಹಾಶಿವರಾತ್ರಿಯನ್ನು ಶೃದ್ಧಾ ಭಕ್ತಿಯಿಂದ ಆಚರಿಸಲಾಯಿತು. ಗೋವಾದ ಪ್ರಸಿದ್ಧ ದೇವಾಲಯಗಳಾದ ಮಂಗೇಶಿ, ಓಲ್ಡಗೋವಾ ಬ್ರಹ್ಮಪುರಿ, ಏಕಶಿಲೆಯಿಂದ ನಿರ್ಮಿತವಾದ ತಾಂಬಡಿಸುರ್ಲಾ ಮಹಾದೇವ ದೇವಸ್ಥಾನ ಸೇರಿದಂತೆ ಗೋವಾದ ಎಲ್ಲ ಮಹಾದೇವ ದೇವಸ್ಥಾನಗಳಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಭಾನುವಾರ ದಿನವಿಡಿ ಅಭಿಷೇಕ ಪೂಜೆ ನೆರವೇರಿಸಲಾಯಿತು.

ಬಹುತೇಕ ಎಲ್ಲ ದೇವಸ್ಥಾನಗಳಲ್ಲಿ ಬೆಳಿಗ್ಗೆ 5 ಗಂಟೆಯಿಂದಲೇ ಭಕ್ತಾದಿಗಳು ಸರತಿ ಸಾಲಲ್ಲಿ ನಿಂತು ಪೂಜೆ ನೆರವೇರಿಸಿದರು. ದಿನವಿಡೀ ಭಕ್ತಾದಿಗಳಿಂದ ಅಭಿಷೇಕ, ಮಹಾಮಂಗಳಾರತಿ, ಭಜನೆ ಸೇವೆ ನೆರವೇರಿಸಲಾಯಿತು. ಭಾನುವಾರವಾಗಿದ್ದರಿಂದ ವಿಶೇಷವಾಗಿ ಎಲ್ಲ ದೇವಸ್ಥಾನಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವುದು ಕಂಡುಬಂತು.

Banner Ad

ಗೋವಾದ ಸಾಖಳಿಯ ಹರವಳೆಯ ಶ್ರೀ ರುದ್ರೇಶ್ವರ ದೇವಸ್ಥಾನದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಸಕುಟುಂಬ ಸಮೇತ ಆಗಮಿಸಿ ಅಭಿಷೇಕ ಪೂಜೆ ನೆರವೇರಿಸಿದರು.

Banner Ad