Banner Ad

ಸುದ್ದಿ ಕನ್ನಡ ವಾರ್ತೆ

. ಕೊಟ್ಟಿಗೆಹಾರ: ಬಣಕಲ್ ನಜರೆತ್ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ಎಸ್.ಜಿ ಧೃತಿ ಕಬಡ್ಡಿ ಪಂದ್ಯಾವಳಿಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪಂಜಾಬಿನಲ್ಲಿ ನಡೆಯುತ್ತಿರುವ 19ಹರೆಯದ ಬಾಲಕೀಯರ ಸಿಐಎಸ್ ಸಿಇ ರಾಷ್ಟ್ರ ಮಟ್ಟದ ಕಬಡ್ಡಿಯಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇವರು ಮೂಡಿಗೆರೆ ತಾಲ್ಲೂಕಿನ ಬಾಸ್ತಿ ಗ್ರಾಮದ ಗಿರೀಶ್ ಹಾಗೂ ಅಶ್ವಿನಿ ದಂಪತಿಗಳ ಪುತ್ರಿ.ಇವರ ಸಾಧನೆಗೆ ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ಹಿಲ್ಡಾ ಲೋಬೋ ಹಾಗೂ ಪೋಷಕರು, ಕ್ರೀಡಾಭಿಮಾನಿಗಳು ಹರ್ಷ ವ್ಯಕ್ತ ಪಡಿಸಿದ್ದಾರೆ.

Banner Ad
Banner Ad