Banner Ad

ಸುದ್ಧಿಕನ್ನಡ ವಾರ್ತೆ

ಚಿಕ್ಕಮಗಳೂರು(ಕೊಟ್ಟಿಗೆಹಾರ): ಬೆಟ್ಟಗೆರೆಯ ಸಮೀಪದ ಕಾಫಿ ತೋಟದ ಹತ್ತಿರದ ಮನೆಯ ಬಳಿ ಇದ್ದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಯಿತು.

Banner Ad

ಬೆಟ್ಟಗೆರೆಯ  ಧರಣೇಂದ್ರ ಜೈನ್ ಅವರ ಮನೆಯ ಸಮೀಪ 12ಅಡಿ ಉದ್ದದ ಕಾಳಿಂಗ ಸರ್ಪವು ಮನೆಯ ಬಳಿ ಕಾಣಿಸಿಕೊಂಡು ಮನೆಯವರು ಭಯಭೀತರಾಗಿದ್ದರು.

ಬಣಕಲ್ ಉರಗ ಪ್ರೇಮಿ ಮೊಹಮ್ಮದ್ ಆರೀಫ್ ಅವರಿಗೆ ಕರೆ ಮಾಡಿ ಕಾಳಿಂಗಸರ್ಪ ಇರುವ  ಬಗ್ಗೆ ಮಾಹಿತಿ ನೀಡಿದ್ದರು.ಸ್ಥಳಕ್ಕೆ ಬಂದ ಆರೀಫ್ ಕಾಳಿಂಗ ಸರ್ಪವನ್ನು ಹರಸಾಹಸ ಪಟ್ಟು ಹಿಡಿದು ಚಾರ್ಮಾಡಿ ಘಾಟ್ ಸುರಕ್ಷಿತಾರಣ್ಯಕ್ಕೆ ಬಿಟ್ಟಿದ್ದಾರೆ.ಈ ಸಂದರ್ಭದಲ್ಲಿ ಉಪ ವಲಯ ಅರಣ್ಯ ಅಧಿಕಾರಿ ಬಸವರಾಜ್, ಸಿಬ್ಬಂದಿ ಮೊಹಸಿನ್ ಇದ್ದರು.

Banner Ad