ಸುದ್ದಿ ಕನ್ನಡ ವಾರ್ತೆ
ಹೊಳೆಹೊನ್ನೂರು: ಭಾರತೀಯ ಸಂಸ್ಕೃತಿ ವಿಶ್ವದಲ್ಲೇ ಶ್ರೇಷ್ಠ ಸ್ಥಾನ ಹೊಂದಿದೆ ಎಂದು ಶ್ರೀಕ್ಷೇತ್ರ ಕೂಡಲಿ ಶೃಂಗೇರಿ ಮಹಾ ಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಸ್ವಾಮೀಜಿ ಶ್ರೀ ಅಭಿನವ ಶಂಕರ ಭಾರತೀ ಮಹಾಸ್ವಾಮಿ ಹೇಳಿದರು.

ಪಟ್ಟಣ ಸಮೀಪದ ಶ್ರೀಕ್ಷೇತ್ರ ಕೂಡಲಿ ಶೃಂಗೇರಿ ಮಹಾ ಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಆವರಣದಲ್ಲಿ ಯುವ ಬ್ರಿಗೇಡ್ ವತಿಯಿಂದ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ತುಂಗಭದ್ರಾ ಆರತಿ ಕರ‍್ಯಕ್ರಮದ ಹಿನ್ನಲೆಯಲ್ಲಿ ನಡೆದ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ಮಾಡಿದರು.

ಈ ಹಿಂದೆ ಯಾವುದೇ ರೀತಿಯ ದುಷ್ಕೃತ್ಯ, ಅಪವಾದ, ಆರೋಪಗಳಿಗೆ ಸಮಾಜದಲ್ಲಿ ಹಿರಿಯರಿಗೆ ಹಾಗೂ ಕುಟುಂಬಕ್ಕೆ ಅಪಮಾನ, ಮರ್ಯಾದೆಗೆ ಅಂಜುತ್ತಿದ್ದರು. ಉತ್ತಮ ನಡತೆಗೆ ಸ್ಥಳೀಯವಾಗಿ ವಿವಿಧ ರೀತಿಯ ಧಾರ್ಮಿಕ ಕಟ್ಟುಪಾಡುಗಳು, ಭಯ, ಭಕ್ತಿ, ಪೂಜೆ, ಪಂಚಾಯಿತಿ, ಸಂಧಾನ ನಡೆಯುತ್ತಿದ್ದವು. ಅದರಿಂದ ಬಹಳಷ್ಟು ಜನರು ತಿದ್ದಿ ಸನ್ನಡೆ ಮನೋಭಾವ ಬೆಳಸಿಕೊಂಡಿದ್ದಾರೆ. ಧಾರ್ಮಿಕತೆ ಹಾಗೂ ಭಕ್ತಿ ಪ್ರಧಾನ ಸಮಾಜದಲ್ಲಿ ಶಾಂತಿ ನೆಲೆಸಿರುತ್ತದೆ. ಅಲ್ಲಿ ಕಾನೂನಿನ ಅಗತ್ಯ ಇರುವುದಿಲ್ಲ. ಸಮಾಜದಲ್ಲಿ ನಾಯಕರಿಂದ ಸುಧಾರಣೆ ಆಗಬೇಕು.
ಆದರೆ ಇತ್ತೀಚೆಗೆ ಜನರ ಮನೋಭಾವ ಬದಲಾಗಿದ್ದು ಎಲ್ಲದಕ್ಕೂ ಕಾನೂನಿನ ಮೊರೆ ಹೋಗುವುದು ಸರಿಯಲ್ಲ. ನದಿಗಳು ನಮ್ಮ ಸಂಸ್ಕೃತಿಯೊAದಿಗೆ ಅವಿನಾನುಭಾವ ಸಂಬAಧ ಹೊಂದಿವೆ. ಸಮೃದ್ಧವಾಗಿ ನೀರು ಇರುವ ಜಾಗದಲ್ಲಿ ಉತ್ತಮ ಸಂಸ್ಕೃತಿ ಹಾಗೂ ಸಂಸ್ಕಾರ ಹೆಚ್ಚಾಗಿರುತ್ತದೆ. ಈ ನೀಟ್ಟಿನಲ್ಲಿ ಯುವ ಬ್ರಿಗೇಡ್ ಜಲ ಮೂಲ ಉಳಿವಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ನದಿ ತೀರದಲ್ಲೆ ಅನೇಕ ನಾಗರೀಕತೆಗಳು ಬೆಳೆದಿವೆ. ಮುಂದೊAದು ದಿನಮಾನದಲ್ಲಿ ಜೀವಜಲ ನದಿಗಳ ಅವನತಿ ಆಗಬಹುದು. ನದಿಯನ್ನು ತಾಯಿಯಂತೆ ಪ್ರೀತಿಸಿ, ಪೂಜಿಸಿ, ಶುದ್ಧವಾಗಿ ಇಟ್ಟುಕೊಳ್ಳಬೇಕು. ನದಿ ನಗುತ್ತಿದ್ದರೆ ಸುತ್ತಲ ಪರಿಸರ ಖುಷಿಯಾಗಿರುತ್ತದೆ. ಆದ್ದರಿಂದ ಸ್ಥಳೀಯರು ಅತಿ ಹೆಚ್ಚು ಕಾಳಚಿ ವಹಿಸಿ ಶುಚಿತ್ವ ಹಾಗೂ ಪಾವಿತ್ರö್ಯತೆ ಕಾಪಾಡಬೇಕು. ಸಾವಿರಾರು ವರ್ಷಗಳ ಇತಿಹಾಸ, ಸಂಸ್ಕೃತಿ, ಧಾರ್ಮಿಕತೆ ಮತ್ತು ಜೀವನಶೈಲಿಯನ್ನು ಹೊತ್ತಿರುವ ತುಂಗಭದ್ರಾ ನದಿ ಇಂದು ಮಾಲಿನ್ಯ ಆಗುತ್ತಿದೆ. ನದಿಗಳು ನಮ್ಮನ್ನು ನಿರಂತರವಾಗಿ ಪೋಷಿಸುತ್ತವೆ. ಆದರೆ ನಾವು ಅದನ್ನು ಸಂರಕ್ಷಿಸುವಲ್ಲಿ ಹಿಂದೆಬಿದ್ದಿದ್ದೇವೆ. ಈ ನದಿಯ ನೀರು ಕೇವಲ ಕೃಷಿಗೆ, ಕುಡಿಯುವವರಿಗೆ ಮಾತ್ರವಲ್ಲ, ಜ್ಞಾನ, ಭಕ್ತಿ, ಸಂಸ್ಕೃತಿಯ ಬೆಳವಣಿಗೆಯೂ ಈ ಹರಿವಿನಲ್ಲಿಯೇ ಸಾಗಿವೆ. ನದಿ ನಮ್ಮ ತಾಯಿ, ನಾವು ಅವಳ ಮಕ್ಕಳಾಗಿ ಕಾಪಾಡುವುದು ನಮ್ಮ ಕರ್ತವ್ಯ. ಇದರಿಂದ ಸುಭೀಕ್ಷ ಸಮಾಜ ನಿರ್ಮಾಣ ಆಗುತ್ತದೆ. ಆದ್ದರಿಂದ ತುಂಗಭದ್ರಾ ಆರತಿ ಕರ‍್ಯಕ್ರಮ ಪ್ರತಿವರ್ಷ ನಡೆಸಲಾಗುತ್ತದೆ ಎಂದರು.
ಹಿರೇಹಡಗಲಿಯ ಶ್ರೀ ಹಾಲ ಸ್ವಾಮಿಜಿ ಮಹಾ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಅಭಿನವ ಹಾಲ ಸ್ವಾಮೀಜಿ ಮಾತನಾಡಿದರು.

ಬಳಿಕ ಮಂಗಳ ವಾಧ್ಯದೊಂದಿಗೆ ಸಂಗಮ ಸ್ಥಳಕ್ಕೆ ಧಾವಿಸಿ ಶ್ರೀಕ್ಷೇತ್ರ ಕಾಶಿ ಮಾದರಿಯಲ್ಲಿ ತುಂಗಭದ್ರಾ ಆಕರ್ಷಕ ಆರತಿ ಮಾಡಲಾಯಿತು. ನೆರೆದ ಜನರ ಮನಸೂರೆ ಗೊಂಡಿತು. ಸಿರ್ಸಿಯ ತಂಡ ತುಂಗಭದ್ರಾ ಆರತಿ ನೆರವೇರಿಸಿತು. ಇದಕ್ಕೂ ಮುನ್ನಾ ಕೂಡ್ಲಿ ಗ್ರಾಮದ ಮಹಿಳೆಯರು ಪೂರ್ಣ ಕುಂಭದೊAದಿಗೆ ಸ್ವಾಗತಿಸಿದರು. ಯುವ ಬ್ರಿಗೇಡ್ ಸ್ವಯಂ ಸೇವಕರು, ಸ್ಥಳೀಯ ಹಾಗೂ ಸುತ್ತಮುತ್ತಲಿನ ನೂರಾರು ಭಕ್ತರು ಭಾಗವಹಿಸಿದ್ದರು.
ಸ್ವಚ್ಚತಾ ಕರ‍್ಯ: ತುಂಗಭದ್ರಾ ಆರತಿ ಹಿನ್ನಲೆಯಲ್ಲಿ ಶನಿವಾರ ಶ್ರಮದಾನದ ಮೂಲಕ ನದಿತಟದ ದಡಗಳಲ್ಲಿ ಕಸ, ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯ ವಸ್ತುಗಳ ಸ್ವಚ್ಛತಾ ಕರ‍್ಯ ಮಾಡಲಾಯಿತು.