ಸುದ್ದಿ ಕನ್ನಡ ವಾರ್ತೆ
ಬಾಗಲಕೋಟೆ: ಸೋಮವಾರ ಸಾಯಂಕಾಲ ಧಿಢೀರ್ ಮಳೆ ಸುರಿದ ಪರಿಣಾಮ ವಾರದ ಸಂತೆಗೆ ಬಾರಿ ತೊಂದರೆಯಾಯಿತು. ಮಳೆಯಿಂದ ಸಂತೆ ಮಾರುಕಟ್ಟೆ ಕೆಸರು ಗದ್ದೆಯಾಗಿ ಬದಲಾಗಿತ್ತು. ಜನರಿಲ್ಲದೆ ವ್ಯಾಪಾರ ವಹಿವಾಟು ಅಸ್ತವ್ಯಸ್ತವಾಯಿತು.
ಮಳೆ ಬಂದರೆ ಸಾಕು ಗ್ರಾಮದಲ್ಲಿನ ಸಂತೆ ಮೈದಾನ ಕೆಸರು ಗದ್ದೆಯಂತಾಗುತ್ತದೆ. ಕೆಸರಲ್ಲೇ ವ್ಯಾಪಾರ-ವಹಿವಾಟು ಮಾಡುವ ದುಸ್ಥಿತಿ ಬಂದೊದಗಿದೆ. ಗ್ರಾಹಕರು ಕೆಸರಲ್ಲೇ ಸಂಚರಿಸಿ ಒಬ್ಬರಿಗೊಬ್ಬರು ಕೆಸರು ಸಿಡಿಸುತ್ತ ತರಕಾರಿ ಕರಿದಿಸುವ ದೃಷ್ಯ ಸಾಮಾನ್ಯವಾಗಿತ್ತು.
ವ್ಯಾಪರಕ್ಕಾಗಿ ತಂದಿರುವ ತರಕಾರಿ ಕೆಸರಲ್ಲಿ ಬಿದ್ದು ಮಣ್ಣುಪಾಲಾಗಿದ್ದರಿಂದ ಗ್ರಾಹಕರು ತರಕಾರಿ ಕರಿದಿಸಲು ಹಿಂದೇಟು ಹಾಕಿದರು. ಇತ್ತ ಬಿಸಿಲಿನ ಬೆಗೆಯಿಂದ ಬಳಲುತ್ತಿದ್ದ ಜನರಿಗೆ ಮಳೆರಾಯ ತಂಪೆರೆದರೆ, ಇತ್ತ ಧಿಡೀರ್ ಮಳೆಯಿಂದ ತೊಂದರೆ ಅನುಭವಿಸುವಂತಾಯಿತು.