ಸುದ್ದಿಕನ್ನಡ ವಾರ್ತೆ
ಪಣಜಿ: ಗೋವಾದ ಬಿಜೆಪಿ ಹಿರಿಯ ನಾಯಕ ಮತ್ತು ಪಕ್ಷದ ರಾಜ್ಯ ಮಾಜಿ ಉಪಾಧ್ಯಕ್ಷ ಅನೀಲ್ ಹೊಬಳೆ ಶುಕ್ರವಾರ ನಿಧನರಾಗಿದ್ದಾರೆ.

ಅನೀಲ್ ಹೊಬಳೆ ಗೋವಾ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ದೀರ್ಘ ಕಾಲ ಸಂಘಟನಾ ಜವಾಬ್ದಾರಯನ್ನು ಹೊದಿದ್ದರು. ಪಕ್ಷದ ಸಂಘಟನೆಗೆ ವಿವಿಧ ಹುದ್ಧೆಗಳಲ್ಲಿ ಕೆಲಸ ಮಾಡುತ್ತಿರುವಾಗ ಪಕ್ಷದ ವಿಸ್ತರಣೆಗೆ ಮಹತ್ವದ ಕೊಡಗೆ ನೀಡಿದ್ದರು. ಇಷ್ಟೇ ಅಲ್ಲದೆಯೇ ಗೋವಾ ರಾಜ್ಯ ಪರಿಶಿಷ್ಠ ಜಾತಿ ಮತ್ತು ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಅಧ್ಯಕ್ಷ ಹುದ್ಧೆಯನ್ನೂ ಹೊಂದಿದ್ದರು.

ಬಿಜೆಪಿ ಪಕ್ಷದಿಂದ ಸಾಂತಾಕ್ರೂಜ್ ವಿಧಾನಸಭಾ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧಿಸಿದ್ದರು.
ಅನೀಲ್ ಹೊಬಳೆ ರವರ ಪಾರ್ಥಿವ ಶರೀರವನ್ನು ಶನಿವಾರ ಸಪ್ಟೆಂಬರ್ 26 ರಂದು ಬೆಳಗ್ಗೆ 11.30 ಕ್ಕೆ ಮೆರ್ಶಿಯಲ್ಲಿರು ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.