Banner Ad

ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಸತ್ತರಿ ತಾಲೂಕಿನ ಕಾಜರೇಧಾಟ್ ಜಲಪಾತ ಪ್ರದೇಶಕ್ಕೆರ ಟ್ರ್ಯಾಕಿಂಗ್ ಹೋಗಿದ್ದ 11 ನೇಯ ತರಗತಿಯ ವಿದ್ಯಾರ್ಥಿ ರಾಹುಲ್ ಬಿಂದ್ (17, ವಾಸ್ಕೊ ಬೈನಾ ನಿವಾಸಿ) ಶುಕ್ರವಾರ ನೀರಲ್ಲಿ ಮುಳುಗಿ ನಾಪತ್ತೆಯಾದ ದುರಾದೃಷ್ಠಕರ ಘಟನೆ ನಡೆದಿದೆ. ಅರಣ್ಯ ಇಲಾಖೆ, ವಾಳಪೈ ಪೋಲಿಸರು, ಸ್ಥಳೀಯ ನಾಗರೀಕರು ರಕ್ಷಣಾ ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿ ಶವವನ್ನು ನೀರಿನಿಂದ ಮೇಲಕ್ಕೆತ್ತಿದ್ದಾರೆ. ಈ ಜಲಪಾತ ವೀಕ್ಷಣೆಗೆ ತೆರಳಲು ಜಿಲ್ಲಾಡಳಿತ ನಿರ್ಬಂಧ ಹೇರಿತ್ತು.

 

Banner Ad

ಗೋವಾದ ವಾಸ್ಕೊದ ದೀಪ್ ವಿಹಾರ್ ಹೈಯರ್ ಸೆಕೆಂಡರ್ ಶಾಲೆಯ 40 ಜನ ವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಂದಿಗೆ ಟೋನಿರ್ ಜಲಪಾತ ಪ್ರದೇಶಕ್ಕೆ ಟ್ರ್ಯಾಕಿಂಗ್ ಗೆ ಹೋಗಿದ್ದರು. ಮಳೆಗಾಲದ ಸದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈ ಜಲಪಾತ ವೀಕ್ಷಣೆಗೆ ಆಗಮಿಸುವುದಕ್ಕೆ ಅರಣ್ಯ ಇಲಾಖೆ ನಿರ್ಬಂಧ ಹೇರಿತ್ತು. ಆದರೆ ಈ ಎಚ್ಚರಿಕೆಯನ್ನು ಮೀರಿ ಈ ಜಲಪಾತ ವೀಕ್ಷಣೆಗೆ ತೆರಳಿ ದುರಾದೃಷ್ಠಕರ ಘಟನೆ ಸಂಭವಿಸಿದೆ.
ಜಲಪಾತದ ಬಳಿ ತಲುಪುತ್ತಿದ್ದಂತೆಯೇ ವಿದ್ಯಾರ್ಥಿ ರಾಹುಲ್ ಬಿಂದ್ ನೀರಿಗೆ ಇಳಿದಿದ್ದ. ಆದರೆ ಆತ ಆಯತಪ್ಪಿ ಆಳವಾದ ನೀರಿಗೆ ಮುಳುಗಿಹೋಗಿ ಕಣ್ಮರೆಯಾದ ಎನ್ನಲಾಗಿದೆ. ಸಹಪಾಟಿಗಳು ಈತನ ರಕ್ಷಣೆಗೆ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.

 

ಘಟನೆಯ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ವಾಳಪೈ ಪೋಲಿಸರು , ಅರಣ್ಯ ಇಲಾಖೆ ಸಿಬ್ಬಂಧಿಗಳು ,ಸ್ಥಳೀಐ ಗ್ರಾಮಸ್ಥರು ಘಟನಾ ಸ್ಠಳಕ್ಕೆ ತಲುಪಿದರು. ಜಲಪಶತದಲ್ಲಿ ನೀರಿನ ಹರಿವು ನಿರಂತರವಾಗಿ ಹೆಚ್ಚುತ್ತಿರುವುದು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎನ್ನಲಾಗಿದೆ. ಹಲವು ಗಂಟೆಗಳ ಕಾರ್ಯಾಚರಣೆಯ ನಂತರ ವಿದ್ಯಾರ್ಥಿಯ ಶವ ನೀರಿನಿಂದ ಮೇಲಕ್ಕೆತ್ತಲಾಗಿದೆ.
ಮಳೆಗಾಲದ ಸಂದರ್ಭದಲ್ಲಿ ರಾಜ್ಯದಲ್ಲಿ ಹಲವು ಜಲಪಶತ ವೀಕ್ಷಣೆಗೆ ನಿರ್ಬಂಧ ಹೇರಲಾಗಿದ್ದರೂ ಕೂಡ ಜಲಪಾತ ವೀಕ್ಷಣೆಗೆ ತರಳುತ್ತಿರುವುದು ಬೇಸರದ ಸಂಗತಿಯಾಗಿದೆ.

Banner Ad