Banner Ad

ಸುದ್ಧಿಕನ್ನಡ ವಾರ್ತೆ
ಪಣಜಿ: ವಿಗ್ರಹಗಳು ಮತ್ತು ಪ್ರತಿಮೆಗಳನ್ನು ಕೆತ್ತನೆ ಮಾಡಿ ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದಿದ್ದ ಖ್ಯಾತ ಶಿಲ್ಪಿ ಪದ್ಮಭೂಷಣ ರಾಮ ಸುತಾರ ನಿಧನರಾಗಿದ್ದಾರೆ. ಅವರು ತಮ್ಮ 101 ನೇಯ ವಯಸ್ಸಿನಲ್ಲಿ ನೊಯ್ಡಾದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಗೋವಾದ ಕಾಣಕೋಣದ ಶ್ರೀಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದಲ್ಲಿ ರಾಮ ಸುತಾರ ಅವರ ಮಾರ್ಗದರ್ಶನದಲ್ಲಿ ನಿರ್ಮಿಸಿದ 77 ಅಡಿ ಎತ್ತರದ ಶ್ರೀರಾಮನ ಮೂರ್ತಿಯನ್ನು ನವೆಂಬರ್ 28 ರಂದು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ್ದರು. ರಾಮ ಸುತಾರ ರವರ ಮಾರ್ಗದರ್ಶನದಲ್ಲಿ ಅವರ ಮಗ ಅನೀಲ ಸುತಾರ್ ರವರು 77 ಅಡಿ ಶ್ರೀರಾಮನ ಮೂರ್ತಿಯನ್ನು ನಿರ್ಮಿಸಿದ್ದರು.

Banner Ad

ಅನೇಕ ಅಜರಾಮರ ಶಿಲ್ಪ, ಮೂರ್ತಿ ತಯಾರಿಸಿದ್ದಾರೆ. ಇವರು ತಯಾರಿಸಿದ ಶಿಲ್ಪಗಳು ಭಾರತ ದೇಶದಲ್ಲಿ ಮಾತ್ರವಲ್ಲದೆಯೇ ವಿದೇಶಗಳಿಗೂ ತಲುಪಿವೆ. ಗುಜರಾತ್ ನಲ್ಲಿ ರಾಮ ಸುತಾರ್ ರವರೇ ಸರ್ದಾರ ವಲ್ಲಭಾಯಿ ಪಟೇಲ್ ರವರ ಮೂರ್ತಿಯನ್ನು ನಿರ್ಮಿಸಿದ್ದರು.

Banner Ad