Banner Ad

ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಹಡಪಡೆಯಲ್ಲಿನ ಬರ್ಚ ಬಾಯ್ ರೋಮಿಯೊ ಲೆನ್ ನೈಟ್ ಕ್ಲಬ್ ನಲ್ಲಿ ( Bircha Boy Romeo Lane Night Club) ಕಳೆದ ಶನಿವಾರ ರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 25 ಜನರು ಸಾವನ್ನಪ್ಪಿದ್ದರು. ಈ ಘಟನೆಯ ನಂತರ ವಿದೇಶಕ್ಕೆ ಪಲಾಯನ ಮಾಡಿದ್ದ ಕ್ಲಬ್ ಮಾಲೀಕರಾದ ಸೌರಬ್ ಲುಥ್ರಾ ಹಾಗೂ ಗೌರವ್ ಲುಥ್ರಾ ಈ ಇಬ್ಬರು ಸಹೋದರರನ್ನು ಥೈಲ್ಯಾಂಡ್ ನಲ್ಲಿ (Thailand) ಪೋಲಿಸರು ಬಂಧಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಗೋವಾ ಪೋಲಿಸರಿಗೆ ದೊಡ್ಡ ಯಶಸ್ಸು ಲಭಿಸಿದಂತಾಗಿದೆ.
ಗೋವಾದ ನೈಟ್ ಕ್ಲಬ್ ಅಗ್ನಿ ಅವಘಡ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಈ ಇಬ್ಬರೂ ಮಾಲೀಕರು ಥೈಲ್ಯಾಂಟ್ ನ ಫುಕೇಟ್ ಗೆ (Phuket, Thailand) ಪಲಾಯನಗೈದಿದ್ದರು. ಗೋವಾ ಪೋಲಿಸರು ಇವರಿಬ್ಬರ ಬಂಧನಕ್ಕಾಗಿ ಇಂಟರಪೋಲ್ ಸಹಕಾರ ಪಡೆದು ಬ್ಲೂಕಾರ್ನರ್ ನೋಟಿಸ್ ಜಾರಿಗೊಳಿಸಿತ್ತು.

Banner Ad

ಈ ಗಂಭೀರ ಪ್ರಕರಣದ ವಿಚಾರಣೆಯ ಒಂದು ಭಾಗವಾಗಿ ಗೋವಾ ಪೋಲಿಸರು ನೈಟ್ ಕ್ಲಬ್ ಮಾಲೀಕರಾದ ಲೂಥ್ರಾ ಸಹೋದರರ ಪಾಸ್ ಪೋರ್ಟ( Passport)  ತಾತ್ಪೂರ್ತಿಕವಾಗಿ ರದ್ಧುಗೊಳಿಸಿದ್ದಾರೆ. ಈ ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವವರೆಗೂ ಪೋಲಿಸ್ರು ಪಾಸ್ ಪೋರ್ಟ ಸಕ್ರೀಯ ಗೊಳಿಸುವುದಿಲ್ಲ. ಇದರಿಂದಾಗಿ ಇವರಿಬ್ಬರೂ ವಿದೇಶಕ್ಕೆ ಪಲಾಯನಗೈಯ್ಯಲು ಸಾಧ್ಯವಿಲ್ಲ ಎನ್ನಲಾಗಿದೆ.

ಕ್ಲಬ್ ಮಾಲೀಕರು ವಿದೇಶಕ್ಕೆ ಪಲಾಯನಗೈದಿರುವ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಆರೋಪಿಗಳ ಶೋಧಕ್ಕಾಗಿ ಅಂತರಾಷ್ಟ್ರೀಯ ಪೋಲಿಸ್ ಸಂಘಟನೆ ಯಿಂದ ಆರೋಪಿಗಳ ವಿರುದ್ಧ ಬ್ಲೂ ಕಾರ್ನರ್ (Blue Corner) ಜಾರಿಗೊಳಿಸಲಾಗಿತ್ತು. ಇಂಟರ್ ಪೋಲ್ ಜಾರಿಗೊಳಿಸಿರುವ ಬ್ಲೂ ಕಾರ್ನರ್ ನೋಟಿಸ್ ನಿಂದಾಗಿ ಆರೋಪಿಗಳ ಚಲನವಲನ ಪತ್ತೆಹಚ್ಚಲು ಸಹಾಯವಾಗಿದ್ದು. ಈ ನೋಟಿಸ್ ಇಂಟರ್ ಪೋಲ್ ನ 195 ಸದಸ್ಯ ದೇಶಗಳಿಗೆ ಕಳುಹಿಸಲಾಗಿತ್ತು. ಇದರಿಂದಾಗಿ ವಿದೇಶಕ್ಕೆ ಪಲಾಯನಗೈದ 4 ದಿನದಲ್ಲಿ ಈ ಇಬ್ಬರನ್ನೂ ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ.

Banner Ad