Banner Ad

ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜ್ಯದ ಬ್ಯಾಪ್ಟಿಸ್ಟ್ ಚರ್ಚ್‍ನ ಪಾದ್ರಿಯೊಬ್ಬರು ವಾಟ್ಸಾಪ್ ನಲ್ಲಿ ಆಕ್ಷೇಪಾರ್ಹ ಮತ್ತು ನಿಂದನೀಯ ಸಂದೇಶಗಳನ್ನು ಕಳುಹಿಸುವ ಮೂಲಕ ಮಹಿಳಾ ಅನುಯಾಯಿಯ ಮೇಲೆ ಕಿರುಕುಳ ನೀಡಲು ಪ್ರಯತ್ನಿಸಿದ ಆರೋಪದ ಮೇಲೆ ಪರ್ವರಿ ಪೆÇಲೀಸರು ಬಂಧಿಸಿದ್ದಾರೆ.

 

Banner Ad

ಪೆÇಲೀಸರರಿಂದ ಲಭ್ಯವಾದ ಮಾಹಿತಿಯ ಅನುಸಾರ- ದೂರುದಾರ ಮಹಿಳೆ ಕೆಲವು ಸಮಯದಿಂದ ಪಾದ್ರಿಯ ಧರ್ಮೋಪದೇಶ ಶಿಬಿರಗಳಿಗೆ ಹಾಜರಾಗುತ್ತಿದ್ದರು. ಪೆÇಲೀಸರಿಗೆ ಸಲ್ಲಿಸಿದ ದೂರಿನಲ್ಲಿ, ಪ್ರಶ್ನಾರ್ಹ ಪಾದ್ರಿ ಅಶ್ಲೀಲ ಮತ್ತು ಅವಮಾನಕರ ಸಂದೇಶಗಳನ್ನು ಕಳುಹಿಸಿದ್ದಲ್ಲದೆ, ತನ್ನ ಬಗ್ಗೆ ಸುಳ್ಳು ಮತ್ತು ದಾರಿತಪ್ಪಿಸುವ ಮಾಹಿತಿಯನ್ನು ತನ್ನ ಅನುಯಾಯಿಗಳಲ್ಲಿ ಹರಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ದೂರಿನ ನಂತರ, ಪೆÇಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 170 ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ಮುನ್ನೆಚ್ಚರಿಕೆಯ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿದರು. ನಂತರ ಅವರನ್ನು ಬಿಎನ್‍ಎಸ್‍ಎಸ್‍ನ ಸೆಕ್ಷನ್ 126 ರ ಅಡಿಯಲ್ಲಿ ಮಾಪ್ಸಾದಲ್ಲಿ ಉಪವಿಭಾಗಾಧಿಕಾರಿಯ ಮುಂದೆ ಹಾಜರುಪಡಿಸಲಾಯಿತು. ಈ ಸಂದರ್ಭದಲ್ಲಿ ಆರೋಪಿ ಮತ್ತು ದೂರುದಾರರ ನಡುವಿನ ವಾಟ್ಸಾಪ್ ಚಾಟ್ ದಾಖಲೆಗಳನ್ನು ಪೆÇಲೀಸರು ಸಾಕ್ಷಿಯಾಗಿ ವಶಪಡಿಸಿಕೊಂಡಿದ್ದಾರೆ.

ಪಾದ್ರಿ ಸಿಕ್ಕಿಬಿದ್ದ ಮೊದಲ ಪ್ರಕರಣ ಇದಲ್ಲ. 2021 ರಲ್ಲಿ, ರಾಷ್ಟ್ರಗೀತೆಯನ್ನು ಅವಮಾನಿಸಿದ ಅವರ ಆಪಾದಿತ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದಾಗಲೂ ಅವರು ಸುದ್ದಿಯಲ್ಲಿದ್ದರು.

Banner Ad