ಸುದ್ಧಿಕನ್ನಡ ವಾರ್ತೆ
ಪಣಜಿ: ಅರಬ್ಬಿ ಸಮುದ್ರದ ವಾಯುವ್ಯ ಹಾಗೂ ಈಶಾನ್ಯ ಭಾಗದಲ್ಲಿ ಹುಟ್ಟಿಕೊಂಡಿರುವ ಅತಿ ತೀವ್ರತೆ ಇರುವ ಶಕ್ತಿ ಚಂಡವಾರುತವು ಭಾರತೀಯ ಕಿನಾರಿ ಭಾಗದಿಂದ ಪಶ್ಚಿಮ ನೈರುತ್ಯ ಕಡೆಗೆ ಸರಿಯುತ್ತಿರುವುದರಿಂದ ಈ ಚಂಡಮಾರುತದ ಪರಿಣಾಮ ಗೋವಾದ ಮೇಲೆ ಉಂಟಾಗುವ ಸಾಧ್ಯತೆ ಕಡಿಮೆ ಇದೆ. ಅಕ್ಟೋಬರ್ 3 ರಿಂದ ಅರಬ್ಬಿ ಸಮುದ್ರದಲ್ಲಿ ಹುಟ್ಟಿಕೊಂಡಿರುವ ಶಕ್ತಿ ಚಂಡಮಾರುತವು ದ್ವಾರಕೆಯಿಂದ ಸುಮಾರು 470 ಕಿಲೋ ಮಟರ್ ಪಶ್ಚಿಮದಡೆಗೆ ಹಾಗೂ ಕರಾಚಿಯಿಂದ ಸುಮಾರು 420 ಕಿಮಿ ನೈರುತ್ಯದ ಎಡೆಗೆ 18 ಕಿಲೋಮೀಟರ್ ಪ್ರತಿ ಗಂಟೆಗೆ ವೇಗವಾಗಿ ಚಲಿಸುತ್ತಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಎನ್.ಐ.ಓ ನಿವೃತ್ತ ಶಾಸ್ತ್ರಜ್ಞ ಹಾಗೂ ಹವಾಮಾನ ತಜ್ಞ ಎಂ.ಆರ್.ರಮೇಶ ಕುಮಾರ್ ರವರು ಈ ಕುರಿತು ಮಾಹಿತಿ ನೀಡಿ- ಈ ಚಂಡಮಾರುತವು ಗುಜರಾತ್ ಅಥವಾ ಮಹಾರಾಷ್ಟ್ರದ ಬದಿಗೆ ತಿರುಗಿದರೆ ಗೋವಾದ ಮೇಲೆ ಇದರ ಪರಿಣಾಮ ಅತ್ಯಂತ ಕಡಿಮೆ ಇರಲಿದೆ. ಗೋವಾಕ್ಕೆ ಶಕ್ತಿ ಚಂಡಮಾರುತದ ಆತಂಕ ಕೂಡ ಕಡಿಮೆ ಇದೆ. ಈ ಶಕ್ತಿ ಚಂಡಮಾರುತದಿಂದಾಗಿ ಗೋವಾದಲ್ಲಿ ಮುಂಬರುವ ಕೆಲ ದಿನಗಳವರೆಗೆ ಅಲ್ಪ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ನೀಡಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಅರಬ್ಬಿ ಸಮುದ್ರದಲ್ಲಿ ಉತ್ಪತ್ತಿಯಾಗುವ ಚಂಡಮಾರುತದ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ 15 ವರ್ಷಗಳಲ್ಲಿ ಉಂಟಾದ 70 ಚಂಡಮಾರುತದ ಪೈಕಿ 25 ಚಂಡಮಾರುತವು ಅರಬ್ಬಿ ಸಮುದ್ರದಲ್ಲಿಯೇ ಉತ್ಪತ್ತಿಯಾಗಿದೆ ಎಂಬುದು ಆತಂಕಕಾರಿ ವಿಷಯವಾಗಿದೆ.