Banner Ad

ಸುದ್ದಿ ಕನ್ನಡ ವಾರ್ತೆ

ಪಣಜಿ ಗೋವಾದ ಮಾಪ್ಸ ಶ್ರೀ ಕವಿಶೈಲ ಕನ್ನಡ ಸಂಘ ದ ವತಿಯಿಂದ ಮಾಪ್ಸ ಬಸ್ ನಿಲ್ದಾಣದ ಬಳಿ ಪ್ರತಿಷ್ಠಾಪಿಸಲಾದ ಕನ್ನಡ ಗಣಪನಿಗೆ ಪ್ರತಿದಿನ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಕನ್ನಡ ಗಣಪನಿಗೆ 3ನೇ ದಿನದಂದು ಕನ್ನಡ ಸಾಹಿತ್ಯ ಪರಿಷತ್ತು ಗೋವಾ ರಾಜ್ಯದ್ಯಕ್ಷ ಡಾ ಸಿದ್ದಣ್ಣ ಮೇಟಿ ,ನೀಲಮ್ಮ ಮೇಟಿ ರವರು ವಿಶೇಷ ಪೂಜೆ ಸಲ್ಲಿಸಿದರು.

Banner Ad

ಈ ಸಂದರ್ಭದಲ್ಲಿ ಗಣಪನಿಗೆ ಪಂಚಾಮೃತ ಅಭಿಷೇಕ ಪಂಚೋಪಚಾರ ಪೂಜೆ ,ಅಷ್ಟೋತ್ತರ ಶತನಾಮಾವಳಿ ಪೂಜೆ ,ಮಹಾ ಮಂಗಳಾರತಿ ,ಮಹಾನ್ವೇದ್ಯ ಸಮರ್ಪಿಸಲಾಯಿತು.

ಭಕ್ತಾದಿಗಳು ಮಹಾಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕವಿಶೈಲ ಕನ್ನಡ ಸಂಘದ ಅಧ್ಯಕ್ಷ ಶಂಬು ಶೆಟ್ಟರ್  ಸೇರಿದಂತೆ ವಿವಿಧ ಕನ್ನಡ ಸಂಘಟನೆಗಳ ಪದಾಧಿಕಾರಿಗಳು, ಕನ್ನಡಿಗರು ಭಕ್ತಾದಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

 

.

Banner Ad