ಸುದ್ಧಿಕನ್ನಡ ವಾರ್ತೆ
Goa: ಗೋವಾ ರಾಜಧಾನಿ ಪಣಜಿ ಸಮೀಪದ ಚಿಂಬಲ್ ಜಂಕ್ಷನ್ ನ ಇಳಿಜಾರು ರಸ್ತೆಯಲ್ಲಿ ಕದಂಬ ಬಸ್ ಬ್ರೇಕ್ ಫೇಲ್ ಆಗಿದ್ದರಿಂದ ಬಸ್ ಪಲ್ಟಿಯಾದ ಘಟನೆ ನಡೆದಿದೆ. ಬಸ್ ಚಾಲಕನ ಜಾಗರೂಕತೆಯಿಂದಾಗಿ ಹೆಚ್ಚಿನ ದುರ್ಘಟನೆ ತಪ್ಪಿದಂತಾಗಿದೆ.

ಬಸ್ ಬ್ರೇಕ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಬಸ್ ಚಾಲಕ ಬಸ್ ನ್ನು ಎಡಕ್ಕೆ ತಿರುಗಿಸಿದ್ದರಿಂದ ಬಸ್ ಅಲ್ಲಿಯೇ ಪಲ್ಟಿಯಾಗಿ ಹೆಚ್ಚಿನ ಅಪಘಾತ ತಪ್ಪಿದೆ. ಈ ಬಸ್ ನಲ್ಲಿ 8 ಜನ ಪ್ರಯಾಣಿಕರು ಇದ್ದರು, ಈ ಪೈಕಿ ಮೂರು ಜನರಿಗೆ ಸಣ್ಣಪುಟ್ಟ ಗಾಯವಾಗಿದೆ. ಶುಕ್ರವಾರ ಬೆಳಿಗ್ಗೆ ಈ ಘಠನೆ ಸಂಭವಿಸಿದೆ.

ಗಾಯಾಳುಗಳನ್ನು ಗೋವಾ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಸಂದರ್ಭದಲ್ಲಿ ಬಸ್ ಮುಂಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಹನಗಳ ಓಡಾಟ ಇತ್ತು. ಆದರೆ ಬಸ್ ಚಾಲಕ ಕಶೀನಾಥ ಗಾವಸ್ ರವರ ಜಾಗರೂಕತನದಿಂದಾಗಿ ದೊಡ್ಡ ಅಪಘಾತ ತಪ್ಪಿದಂತಾಗಿದೆ.