ಸುದ್ದಿಕನ್ನಡ ವಾರ್ತೆ
Goa: ಗೋವಾ ಪೆÇಲೀಸ್ ಮಹಾನಿರ್ದೇಶಕರ (ಡಿಜಿಪಿ) ಕಚೇರಿಯನ್ನು ಸ್ಫೋಟಿಸಲು ಐಇಡಿ ಬಳಸಲಾಗುವುದು ಎಂದು ಅನಾಮಧೇಯ ಇಮೇಲ್ ಬಂದ ನಂತರ, ಗೋವಾ ಪೆÇಲೀಸರಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಬೆದರಿಕೆಗೆ ಪ್ರತಿಕ್ರಿಯೆಯಾಗಿ, ಬಾಂಬ್ ನಿಷ್ಕ್ರಿಯ ದಳವನ್ನು ತಕ್ಷಣವೇ ಪಣಜಿಯಲ್ಲಿರುವ ಡಿಜಿಪಿ ಕಚೇರಿಗೆ ರವಾನಿಸಿ, ಆವರಣದಲ್ಲಿ ಸಂಪೂರ್ಣ ಶೋಧ ನಡೆಸಲಾಯಿತು.
ಬಾಂಬ್ ನಿಷ್ಕ್ರಿಯ ತಂಡವು ಇಡೀ ಪೆÇಲೀಸ್ ಪ್ರಧಾನ ಕಚೇರಿಯಲ್ಲಿ ಸಮಗ್ರ ಶೋಧವನ್ನು ಪೂರ್ಣಗೊಳಿಸಿತು. ವ್ಯಾಪಕ ಪರಿಶೀಲನೆಯ ನಂತರ, ಯಾವುದೇ ಸ್ಫೋಟಕಗಳು ಕಂಡುಬಂದಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದರು ಮತ್ತು ಇಮೇಲ್‍ನಲ್ಲಿರುವ ಬೆದರಿಕೆಯನ್ನು ವಂಚನೆ ಎಂದು ಪೋಲಿಸರು ಪರಿಗಣಿಸಿದ್ದಾರೆ. ಈ ಬೆದರಿಕೆ ಕಳವಳವನ್ನು ಹುಟ್ಟುಹಾಕಿದೆ, ಏಕೆಂದರೆ ಇಮೇಲ್ ಅನ್ನು ಪೆÇಲೀಸರಿಗೆ ಕಳುಹಿಸಲಾಗಿದ್ದಲ್ಲದೆ, ಗೋವಾದ ಇಂಗ್ಲಿಷ್ ಪತ್ರಿಕೆ ಕಛೇರಿಗೂ ಕಳುಹಿಸಲಾಗಿದ್ದು, ಪರಿಸ್ಥಿತಿ ಇನ್ನಷ್ಟು ಗಂಭೀರಗೊಳಿಸುವಂತೆ ಮಾಡಿತ್ತು.
ಡಿಜಿಪಿ ಕಚೇರಿಯೊಳಗೆ ಐಇಡಿ ಅಡಗಿಸಿಡಲಾಗಿದೆ ಎಂದು ಅನಾಮಧೇಯ ಬೆದರಿಕೆ ಪತ್ರದಲ್ಲಿ ಹೇಳಲಾಗಿದ್ದು, ಇಮೇಲ್‍ನ ಮೂಲವನ್ನು ಪತ್ತೆಹಚ್ಚಲು ಮತ್ತು ಕಳುಹಿಸಿದವರನ್ನು ಗುರುತಿಸಲು ವಿವರವಾದ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಹಿರೀಯ ಪೋಲಿಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.