ಸುದ್ದಿಕನ್ನಡ ವಾರ್ತೆ
Goa: ಯುಗಾದಿ ಪಾಡ್ಯ ಎಂದರೆ ಹಿಂದೂ ಹೊಸ ವರ್ಷದ ಮೊದಲ ದಿನ. ಈ ದಿನದಿಂದ ಹೊಸ ವರ್ಷ ಆರಂಭಗೊಳ್ಳುತ್ತದೆ. ವರ್ಷದ ಮೊದಲ ದಿನ ನಾವು ಹೇಗೆ ವರ್ತಿಸುತ್ತೇವೋ ಅದೇ ರೀತಿ ವರ್ಷಪೂರ್ತಿ ಇರುತ್ತೇವೆ ಎನ್ನಲಾಗುತ್ತದೆ.ಇದರಿಂದಾಗಿಯೇ ಹೊಸ ವರ್ಷದಂದು ಉತ್ತಮವಾಗಿ ವರ್ತಿಸಬೇಕು. ಯುಗಾದಿ ಎಂದರೆ ಹಿಂದೂ ಶಾಸ್ತ್ರದ ಅನುಸಾರ ಚೈತ್ರ ಶುದ್ಧ ಪ್ರತಿಪದ, ವರ್ಷದ ಮೊದಲ ತಿಥಿ. ಗೋವಾದಲ್ಲಿ ಯುಗಾದಿ ಹಬ್ಬವನ್ನು ಗುಡಿ ಪಾಡವಾ, ಸಂಸಾರ ಪಾಡವಾ ಎಂದು ಕರೆಯುತ್ತಾರೆ. ಹಿಂದೂ ಧರ್ಮದಲ್ಲಿ ಮೂರುವರೆ ಮುಹೂರ್ತಗಳಲ್ಲಿ ಯುಗಾದಿ ಪಾಡ್ಯ ಕೂಡಾ ಒಂದು ಎಂದು ಹೇಳಲಾಗುತ್ತದೆ.
ಯುಗಾದಿ ಹಬ್ಬದಂದು ಗೋವಾದಲ್ಲಿ ಜನರು ಮನೆ ಮುಂದೆ ರಂಗೋಲಿ ಹಾಕಿ, ಕಹಿ ಬೇವಿನ ಎಲೆಗಳನ್ನು ನೀರಿಗೆ ಹಾಕಿ ಸ್ನಾನ ಮಾಡುತ್ತಾರೆ. ಗೋವಾದಲ್ಲಿ ಯುಗಾದಿ ಹಬ್ಬದಂದು ಗುಡಿ(ಕೇಸರಿ ಧ್ವಜ) ಏರಿಸುವ ಪದ್ದತಿಯಿದೆ. ಧ್ವಜ ಏರಿಸುವಾಗ ಅದಕ್ಕೆ ಮಾವಿನ ಟೊಂಗೆ,ಕಹಿ ಬೇವಿನ ಎಲೆ, ಹಾರ ಹಾಕಿ, ಒಂದು ಕಲಶಹಾಕಿ ಮೇಲೇರಿಸಲಾಗುತ್ತದೆ. ಗೋವಾದಲ್ಲಿ ಇದಕ್ಕೆ ಗುಡಿ ಏರಿಸುವುದು ಎನ್ನುತ್ತಾರೆ.