ಸುದ್ಧಿಕನ್ನಡ ವಾರ್ತೆ
ಬೆಂಗಳೂರು: ಪ್ರಸಕ್ತ ಬಾರಿ ಮಂಡ್ಯದಲ್ಲಿ 87 ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಡಿಸೆಂಬರ್ 20 ರಿಂದ ಮೂರು ದಿನಗಳ ಕಾಲ ನಡೆಯುತ್ತಿದೆ. ಈ ಸಮ್ಮೇಳನಕ್ಕೆ ಹೊರ ರಾಜ್ಯ ಗೋವಾದಿಂದ ವಿಶೇಷ ಆಮಂತ್ರಿತರಾಗಿ 20 ಜನ ಕಸಾಪ ಪದಾಧಿಕಾರಿಗಳನ್ನು ಆಮಂತ್ರಿಸಲಾಗಿದೆ. ಅಂತೆಯೇ ಇವರೆಲ್ಲರಿಗೂ ಸಮ್ಮೇಳನದಲ್ಲಿ ವಸತಿ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಈಗಾಗಲೇ ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಸಿದ್ಧಣ್ಣ ಮೇಟಿ ರವರ ನೇತೃತ್ವದಲ್ಲಿ ಕಸಾಪ ಗೋವಾ ರಾಜ್ಯ ಘಟಕ , ಉತ್ತರ ಮತ್ತು ದಕ್ಷಿಣ ಗೋವಾ ಜಿಲ್ಲಾ ಘಟಕ, ತಾಲೂಕಾ ಘಟಕಗಳ ಪದಾಧಿಕಾರಿಗಳು ಮಂಡ್ಯ ಸಮ್ಮೇಳನಕ್ಕೆ ತೆರಳಿದ್ದಾರೆ. ಅಂತೆಯೇ ಗೋವಾ ರಾಜ್ಯದಿಂದ ಸಮ್ಮೇಳನದಲ್ಲಿ ಕವಿಗೋಷ್ಠಿಗೆ ಮತ್ತು ಸನ್ಮಾನಕ್ಕೆ ಹಿರೀಯ ಕನ್ನಡಿಗರಿಗೆ ಅವಕಾಶ ಲಭಿಸಿದೆ. ಇಷ್ಟೇ ಅಲ್ಲದೆಯೇ ಗೋವಾದಿಂದ ಹಲವು ಜನ ಕನ್ನಡಿಗರು ಈ ಸಮ್ಮೇಳನದಲ್ಲಿ ಪಾಲ್ಗೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ.

ಕಳೆದ ಬಾರಿ ಹಾವೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಕೂಡ ಗೋವಾದಿಂದ ಕಸಾಪ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಪ್ರಸಕ್ತ ಬಾರಿ ಮಂಡ್ಯದಲ್ಲಿ ಈ ಬೃಹತ್ ಸಮ್ಮೇಳನ ಡಿಸೆಂಬರ್ 20,21,22 ಈ ಮೂರು ದಿನಗಳ ಕಾಲ ನಡೆಯಲಿದೆ.