ಸುದ್ಧಿಕನ್ನಡ ವಾರ್ತೆ
Goa : ಗೋವಾ ರಾಜ್ಯಕ್ಕೂ ಕೂಡ 1947 ರಲ್ಲಿ ಸ್ವಾತಂತ್ರ್ಯ ಲಭಿಸಿದ್ದರೆ 74 ಜನ ಸ್ವಾತಂತ್ರ್ಯ ಹೋರಾಟಗಾರರು ಹುತಾತ್ಮರಾಗುತ್ತಿರಲಿಲ್ಲ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಹೇಳಿದ್ದಾರೆ. ಗೋವಾ ರಾಜ್ಯವು 19 ಡಿಸೆಂಬರ್ 1961 ರಂದು ಪೋರ್ಚುಗೀಸರ ಆಳ್ವಿಕೆಯಿಂದ ಮುಕ್ತವಾಯಿತು. ಈ ದಿನವನ್ನು ಗೋವಾ ರಾಜ್ಯ ಮುಕ್ತಿ ದಿನ ಎಂದು ಆಚರಣೆ ಮಾಡಲಾಗುತ್ತದೆ.

ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಗೋವಾ ಮುಕ್ತಿ ಸಂಗ್ರಾಮದಲ್ಲಿ 1955 ರಿಂದ 1961 ರ ಕಾಲಾವಧಿಯಲ್ಲಿ ಹೋರಾಟಿ ಹುತಾತ್ಮರಾದ 14 ಜನ ಸ್ವಾತಂತ್ರ್ಯ ಹೋರಾಟಗಾರರ ಮಕ್ಕೋಳನ್ನು ಗುರುವಾರ ಗೋವಾ ಮುಕ್ತಿ ದಿನಾಚರಣೆಯಂದು ಸನ್ಮಾನಿಸಲಾಗುತ್ತಿದೆ. ಇವರಿಗೆ ತಲಾ 10 ಲಕ್ಷ ರೂ ಗೌರವ ಧನವನ್ನೂ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಣಜಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾತನಾಡುತ್ತಿದ್ದರು.