ಸುದ್ಧಿಕನ್ನಡ ವಾರ್ತೆ
Goa : ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರ ಪತ್ನಿ ಹಾಗೂ ಬಿಜೆಪಿ ನಾಯಕಿ ಸುಲಕ್ಷಣಾ ಸಾವಂತ್ ರವರು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ವಿರುದ್ಧ 100 ಕೋಟಿ ರೂಪಾಯಿಗಳ ಮಾನನಷ್ಠ ಮೊಕದ್ಧಮೆ ಹೂಡಿದ್ದಾರೆ.

ಎಎಪಿ ನಾಯಕ ಸಂಜಯ್ ಸಿಂಗ್ ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರು. ಗೋವಾ ಸಿಎಂ ಪ್ರಮೋದ ಸಾವಂತ್ ರವರ ಪತ್ನಿ ಸುಲಕ್ಷಣಾ ಸಾವಂತ್ ರವರ ಮೇಲೆ ಕ್ಯಾಶ್ ಪೊರ್ ಜೋಬ್ ಆರೋಪ ಹೋರಿಸಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಮಾನಹಾನಿ ಮಾಡುವ ಯತ್ನ ನಡೆದಿದೆ ಎಂದು ಸಂಜಯ್ ಸಿಂಗ್ ವಿರುದ್ಧ ಮಾನನಷ್ಠ ಮೊಕದ್ಧಮೆ ಹೂಡಿದ್ದಾರೆ.

ಸುಲಕ್ಷಣಾ ಸಾವಂತ್ ರವರು ಗೋವಾದ ಬಿಚೋಲಿ ನ್ಯಾಯಾಲಯದಲ್ಲಿ ಈ ಅರ್ಜಿ ಸಲ್ಲಿಸಿದ್ದಾರೆ. ಅದರಂತೆಯೇ ನ್ಯಾಯಾಲಯವು ಸಂಜಯ್ ಸಿಂಗ್ ರವರಿಗೆ ನೋಟಿಸ್ ಜಾರಿಗೊಳಿಸಿದ್ದು ಜನವರಿ 10 ರಂದು ಮಧ್ಯಾನ್ಹ 2.30 ಕ್ಕೆ ನ್ಯಾಯಾಲಯದಲ್ಲಿ ಹಾಜರಾಗುವಂತೆ ಆದೇಶ ನೀಡಿದೆ.