ಸುದ್ಧಿಕನ್ನಡ ವಾರ್ತೆ
OLD GOA: ಓಲ್ಡಗೋವಾದಲ್ಲಿ ನವೆಂಬರ್ 21 ರಿಂದ ಆರಂಭಗೊಂಡಿರುವ ಸಂತ ಫ್ರಾನ್ಸಿಸ್ ಜೇವಿಯರ್ ಶವದರ್ಶನ ಸಮಾರಂಭ ಆರಂಭಗೊಂಡು ಒಂದು ತಿಂಗಳು ಪೂರ್ಣಗೊಳ್ಳಲು ಇನ್ನು ಕೆಲವೇ ದಿನ ಬಾಕಿ ಇದೆ. ಒಟ್ಟೂ 45 ದಿನಗಳ ಕಾಲ ಈ ಸಮಾರಂಭ ನಡೆಯಲಿದ್ದು ಸದ್ಯ ಭಾರಿ ಸಂಖ್ಯೆಯಲ್ಲಿ ಜನತೆ ಓಲ್ಡಗೋವಾಕ್ಕೆ ಆಗಮಿಸುತ್ತಿದ್ದು, ಭಾರಿ ಜನಜಂಗುಳಿ ಕಂಡುಬರುತ್ತಿದೆ.

ಓಲ್ಡಗೋವಾದಲ್ಲಿರುವ ಸಂತ ಫ್ರಾನ್ಸಿಸ್ ಜೇವಿಯರ್ ರವರ ಶವದರ್ಶನ ಪ್ರತಿ 10 ವರ್ಷಗಳಿಗೊಮ್ಮೆ ನಡೆಯುತ್ತದೆ. ಈ ಬೃಹತ್ ಸಮಾರಂಭದಲ್ಲಿ ವಿವಿಧ ದೇಶಗಳಿಂದ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಚರ್ಚ ಪರಿಸರದಲ್ಲಿರುವ ಜಾತ್ರೆಗೆ ವಿವಿಧ ವಸ್ತುಗಳ ಖರಿದಿಗೆ ಕೂಡ ಜನ ಮುಗಿ ಬೀಳುತ್ತಿದ್ದಾರೆ.

ಓಲ್ಡಗೋವಾ ಪರಿಸರದಲ್ಲಿ ಬಂದಿರುವ ಜಾತ್ರೆಯಲ್ಲಿ ಪಾರಂಪರಿಕ ಖಾದ್ಯಗಳು, ಬಟ್ಟೆ ಅಂಗಡಿ, ಅಲಾಂರಿಕ ಸಾಮಗ್ರಿಗಳು ಹೀಗೆ ವಿವಿಧ ಅಗತ್ಯ ವಸ್ತುಗಳ ನೂರಾರುಂಗಡಿ ಹಾಕಲಾಗಿದೆ. ಈ ಅಂಗಡಿಗಳಲ್ಲಿ ಸದ್ಯ ಗ್ರಾಹಕರ ಖರೀದಿ ಜೋರಾಗಿದೆ. ಪ್ರತಿದಿನ ಸಂಜೆ ಭಾರಿ ಸಣಖ್ಯೆಯಲ್ಲಿ ಜನರು ಆಗಮಿಸುತ್ತಿದ್ದು ಹೆಚ್ಚಿನ ಗರ್ದಿ ಕಂಡುಬರುತ್ತಿದೆ. ವಾಹನಗಳ ನಿಲುಗಡೆಗೆ ಕೂಡ ಎರಡುಮೂರು ಕಡೆಗಳಲ್ಲಿ ವ್ಯವಸ್ಥೆ ಕಲ್ಪಿಸಿದ್ದರೂ ಕೂಡ ಹೆಚ್ಚಿನ ವಾಹನ ದಟ್ಟಣೆಯುಂಟಾಗುತ್ತಿದೆ.

ಓಲ್ಡಗೋವಾ ಚರ್ಚ ಪರಿಸರದಲ್ಲಿ ಪ್ರತಿದಿನ ವಿವಿಧ ಭಾಷೆಗಳಲ್ಲಿ ಪ್ರಾಥನಾ ಸಭೆಗಳು ನಡೆಯುತ್ತಿದೆ. ಪ್ರಾರ್ಥನಾ ಸಭೆಗೆ ಪೆಂಡಾಲ್ ಹಾಕಿ ಸಾವಿರಾರು ಸಂಖ್ಯೆಯಲ್ಲಿ ಆಸನ ವ್ಯವಸ್ಥೆಯಿದೆ. ಓಲ್ಡಗೋವಾ ಜಾತ್ರೆ ಇನ್ನೂ ಕೆಲೇ ದಿನ ಬಾಕಿ ಉಳಿದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಆರಮಿಸುವ ಸಾಧ್ಯತೆಯಿದೆ ಎಂದೇ ಹೇಳಲಾಗುತ್ತಿದೆ.