ಸುದ್ಧಿಕನ್ನಡ ವಾರ್ತೆ
ಪಣಜಿ: ರಾಜ್ಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಬೆಳಕಿಗೆ ಬಂದ ಭೂ ಕಬಳಿಕೆ ಪ್ರಕರಣಗಳ ರೂವಾರಿ ಸಿದ್ದಿಕಿ ಅಲಿಯಾಸ್ ಸುಲೈಮಾನ್ ಖಾನ್ ಎಂಬಾತ ಪೆÇಲೀಸ್ ಪೇದೆ ಅಮಿತ್ ನಾಯಕ್ ನೆರವಿನೊಂದಿಗೆ ಶುಕ್ರವಾರ ಮುಂಜಾನೆ ಜೈಲಿನಿಂದ ಪರಾರಿಯಾಗಿದ್ದಾನೆ. ಈ ಘಟನೆ ಬಗ್ಗೆ ರಾಜ್ಯದ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ.
ಕ್ರೈಂ ಬ್ರಾಂಚ್ ಜೈಲಿನಿಂದ ಸಿದ್ದಿಕಿ ಸುಲೇಮಾನ್ ಪರಾರಿಯಾದ ಪ್ರಕರಣವು ರಾಜ್ಯದಲ್ಲಿ ಪೆÇಲೀಸರು ಅಪರಾಧಿಗಳ ಏಜೆಂಟ್ ಮತ್ತು ರಕ್ಷಕರಂತೆ ವರ್ತಿಸುವುದನ್ನು ತೋರಿಸುತ್ತದೆ. ಹಫ್ತಾ ವಸೂಲಿಯಿಂದ ಹಿಡಿದು ಮನೆಗಳ್ಳತನ, ಭೂಗಳ್ಳತನದಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ದರೋಡೆಕೋರರಿಗೆ ಪೆÇಲೀಸರು ರಕ್ಷಣೆ ನೀಡುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕರಲ್ಲಿ ಅವರ ಮೇಲಿನ ನಂಬಿಕೆ ಕಡಿಮೆಯಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಯೂರಿ ಅಲೆಮಾವ್ ಟೀಕಿಸಿದ್ದಾರೆ. ಈ ಘಟನೆಗೆ ಕಾರಣರಾದವರ ವಿರುದ್ಧ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಿದ್ದಿಕಿ ಸುಲೇಮಾನ್ ಜೈಲಿನಿಂದ ಪರಾರಿಯಾಗಿರುವ ಬಗ್ಗೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಮಿತ್ ಪಾಟ್ಕರ್ ಪೆÇಲೀಸ್ ಇಲಾಖೆ ವಿರುದ್ಧ ಕಿಡಿಕಾರಿದ್ದಾರೆ. ಸುಲೇಮಾನ್ ತಪ್ಪಿಸಿಕೊಳ್ಳಲು ಪೆÇಲೀಸ್ ಪೇದೆ ಸಹಾಯ ಮಾಡಿರುವುದು ನಿರ್ಲಕ್ಷ್ಯದ ಪರಮಾವಧಿ. ಅಪರಾಧ ವಿಭಾಗದ ಸೂಪರಿಂಟೆಂಡೆಂಟ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಪಾಟ್ಕರ್ ಒತ್ತಾಯಿಸಿದ್ದಾರೆ.
ಈ ಘಟನೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಉಲ್ಲೇಖಿಸಿದ್ದಾರೆ. ಜೈಲಿನಲ್ಲಿ ಸಿದ್ದಿಕಿ ಸುಲೇಮಾನ್‍ಗೆ ವಿಆರ್‍ಪಿ ಸೌಲಭ್ಯ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಹಾಗಾಗಿ ಸುಲೇಮಾನ್ ಪರಾರಿಯಾಗಿರುವ ಪ್ರಕರಣದಲ್ಲಿ ಸಮಗ್ರ ತನಿಖೆಯಾಗಬೇಕಿದೆ. ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್, ಪೆÇಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಈ ಬಗ್ಗೆ ವಿವರಣೆ ನೀಡಬೇಕಾಗಿದೆ ಎಂದು ಕಾಂಗ್ರೆಸ್ ಮಾಜಿ ರಾಜ್ಯಾಧ್ಯಕ್ಷ ಗಿರೀಶ್ ಚೋಡಣಕರ್ ಹೇಳಿದ್ದಾರೆ.