ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಕ್ಯಾಶ್ ಪೊರ್ ಜೋಬ್ ಪ್ರಕರಣದಲ್ಲಿ ಆಕ್ರಮಣಕ್ಕೊಳಗಾಗಿದ್ದ ಕಾಂಗ್ರೇಶ್ ಶಾಸಕ ಕಾರ್ಲುಸ್ ಪೆರೆರಾ ಇದೀಗ ಮತ್ತೊಂದು ವಾದಕ್ಕೆ ಸಿಲುಕಿಕೊಂಡಿದ್ದಾರೆ. ಪರೆರಾರವರದ್ದೆನ್ನಲಾದ ಆಕ್ಷೇಪಾರ್ಹ ವೀಡಿಯೊವೊ ಗೋವಾ ರಾಜ್ಯಾದ್ಯಂತ ಭಾರಿ ಸದ್ದುಮಾಡುತ್ತಿದೆ.
ರಾಜ್ಯ ಬಿಜೆಪಿ ಪ್ರಮುಖರು ಮಂಗಳವಾರ ಪಣಜಿಯಲ್ಲಿ ಶಾಸಕ ಪೆರೆರಾ ರವರನ್ನು ನಿಷೇಧಿಸಿ ಕಾಂಗ್ರೇಸ್ ಭವನದ ಎದುರು ಪ್ರತಿಭಟನೆ ನಡೆಸಿದರು. ಕಾಂಗ್ರೇಸ್ ಶಾಸಕ ಪೆರೆರಾ ರವರನ್ನು ಕೂಡಲೇ ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಬಿಜೆಪಿ ಯುವ ಮೋರ್ಚಾ ಆಘ್ರಹಿಸಿದೆ.
ಶಾಸಕರ ಅಶ್ಲೀಲ ವೀಡಿಯೊ ವೈರಲ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಪೋಲಿಸರು ಈಗಾಗಲೇ ಓಢಿಶಾ ಮೂಲದ ಕುಕೇಶ್ ರಾವುತ್ ಎಂಬ 25 ವರ್ಷದ ಯುವಕನನ್ನು ಬಂಧಿಸಿದ್ದಾರೆ. ಈತ ಶಾಸಕರ ಅಶ್ಲೀವ ವೀಡಿಯೊ ವೈರಲ್ ಮಾಡುವುದಾಗಿ ಬೆದರಿಸಿ 5 ಕೋಟಿ ರೂ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.
ಅಪರಿಚಿತ ವ್ಯಕ್ತಿತಯೋರ್ವ ವೀಡಿಯೊ ಕಾಲ್ ಮಾಡಿ ಆ ವ್ಯಕ್ತಿ ವೀಡಿಯೊ ರೆಕಾರ್ಡ ಮಾಡಿ ನನ್ನ ವೀಡಿಯೊವನ್ನು ಮಹಿಳೆಯ ವೀಡಿಯೊದೊಂದಿಗೆ ಸೇರಿಸಿ ಅಶ್ಲೀಲ ವೀಡಿಯೊವನ್ನು ನನಗೆ ಕಳುಹಿಸಿದ್ದ ಎಂದು ಶಾಸಕರು ಪೋಲಿಸ್ ದೂರು ಸಲ್ಲಿಸಿದ್ದರು.