Banner Ad

ಸುದ್ಧಿಕನ್ನಡ ವಾರ್ತೆ

Goa: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಮಹಾಸ್ವಾಮಿಗಳು ಶ್ರೀ ಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರಮಠ ಇವರು ಡಿಸೆಂಬರ್ 11 ಗೀತಾಜಯಂತಿಯಂದು ಗೋವಾಕ್ಕೆ ಆಗಮಿಸಲಿದ್ದಾರೆ. ದಿನಾಂಕ 12 ರಂದು ಶ್ರೀ ಗಿರೀಶ ಹೆಗಡೆ ಹಾಗೂ ಕುಟುಂಬದವರು ಭಿಕ್ಷಾಸೇವೆಯ ಸಮರ್ಪಣೆಯನ್ನು ಮಾಡಲಿದ್ದಾರೆ. ಅಂದು ಮಧ್ಯಾಹ್ನ 12 ಗಂಟೆಗೆ ಶ್ರೀಗಳ ಆಶೀರ್ವಚನ ಹಾಗೂ ಸಾರ್ವಜನಿಕ ಮಂತ್ರಾಕ್ಷತೆ ಕಾರ್ಯಕ್ರಮ ಇರಲಿದೆ. ಆಗಮಿಸಿದ ಎಲ್ಲರಿಗೂ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ,

Banner Ad

ದಿನಾಂಕ 13 ರಂದು ಗೋವಾ ವಲಯದ ಪರವಾಗಿ ಶ್ರೀ ಜಯರಾಮ ಭಟ್ಟ ದಂಪತಿಗಳು ಭಿಕ್ಷಾಸೇವೆಯ ಸಮರ್ಪಣೆಯನ್ನು ಮಾಡಲಿದ್ದಾರೆ. ಆದಿನ ಆಶೀರ್ವಚನ ಹಾಗೂ ಮಂತ್ರಾಕ್ಷತೆ ಇರುವುದಿಲ್ಲ. ಮಹಾಪ್ರಸಾದದ ವ್ಯವಸ್ಥೆ ಇದೆ.

ಎರಡೂ ದಿನದ ಕಾರ್ಯಕ್ರಮಗಳು ಶ್ರೀ ಗಿರೀಶ ಹೆಗಡೆಯವರ ಮನೆ ನಂ. 873/1, ಶ್ರೀಸಮಷ್ಟಿ, ಸಬಾಸ್ಟಿಯನ್ ಚಾಪೆಲ್ ಸಮೀಪ, ನಾವೆಲಿ, ಮಡಗಾಂವ್ ಇಲ್ಲಿ ನಡೆಯಲಿದೆ.

ಗೋವಾದಲ್ಲಿರುವ ಸಮಸ್ತ ಹವ್ಯಕರು ಹಾಗೂ ಮಠದ ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಗೋವಾ ವಲಯದ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.

Banner Ad