ಸುದ್ಧಿಕನ್ನಡ ವಾರ್ತೆ

ಪಣಜಿ: ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಅಮೃತ ಬಳ್ಳಿ ಎಂಬ ಔಷಧಿ ಸಸ್ಯವು ಗ್ರಾಮೀಣ ಪ್ರದೇಶದ ಜನರಿಗೆ ಪರಿಹಾರ ನೀಡಿತು. ಗೋವಾದ ಬಾಂದೋಡದ ತಾನಾಜಿ ಗಾವಡೆ ರವರು ಅಮೃತ ಬಳ್ಳಿ ಗಿಡದ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಅಮೃತ ಬಳ್ಳಿಯಲ್ಲಿ ಗಣೇಶ ಚತುರ್ಥಿಯಲ್ಲಿ ಹದ್ದಿನ ಆಕಾರದಲ್ಲಿ ಫಲಾವಳಿಯನ್ನು ರಚಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಗೋವಾ ರಾಜ್ಯ ಸರ್ಕಾರ ಗಣೇಶ ಚತುರ್ಥಿಯ ಫಲಾವಳಿ ಸ್ಫರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗಳಿಸಿರುವ ತಾನಾಜಿ ರವರು ಪ್ರಸಕ್ತ ಬಾರಿ ರಚಿಸಿರುವ ಫಲಾವಳಿಯು ಸದ್ಯ ಆಕರ್ಷಣೆಯ ಕೇಂದ್ರವಾಗಿದೆ. ಸಪ್ಟೆಂಬರ್ 13 ರ ವರೆಗೆ ಈ ಫಲಾವಳಿ ಚಿತ್ರವನ್ನು ತಮ್ಮ ಮನೆಯಲ್ಲಿ ವೀಕ್ಷಿಸಲು ಲಭ್ಯವಿರುತ್ತದೆ ಎಂದು ತಾನಾಜಿ ತಿಳಿಸಿದ್ದಾರೆ.

ಗಣೇಶ ಚತುರ್ಥಿಗೆ ಮಾಟೋಳಿ ಸಿದ್ಧಪಡಿಸುವಾಗ ತಾನಾಜಿ ರವರು ಮತ್ತು ಅವರ ಕುಟುಂಬ ಕಾಡು ಮತ್ತು ಔಷಧೀಯ ಹಣ್ಣುಗಳು, ಔಷಧಿಯ ಬೇರುಗಳು, ಬಳ್ಳಿಗಳು, ದ್ವಿದಳ ಧಾನ್ಯಗಳು ಮತ್ತು ತೆನೆಗಳನ್ನು ಬಳಕೆ ಮಾಡಿದ್ದಾರೆ. ಔಪಚಾರಿಕವಾಗಿ ಸಂಪ್ರದಾಯದಂತೆ ಮಾರುಕಟ್ಟೆಯಲ್ಲಿ ಸಿಗುವ ಹಣ್ಣುಗಳನ್ನು ಫಲಾವಳಿಕಟ್ಟಲು ಬಳಕೆ ಮಾಡಿದ್ದಾರೆ. ತಾನಾಜಿ ರವರು ಅವನ ಸ್ನೇಹಿತರು ಚೋರ್ಲಾ ಘಾಟ್, ಅನ್ಮೋಡ ಘಾಟ್, ಭಾಗದಲ್ಲಿ ಹುಡುಕಿ ನೈಸರ್ಗಿಕ ವಸ್ತುಗಳನ್ನು ಸಂಗ್ರಹಿಸಿದ್ದಾರೆ, ಈ ಮೂಲಕ ಫಲಾವಳಿಯಲ್ಲಿ ಗರುಡನನ್ನು ಚಿತ್ರಿಸಿದ್ದಾರೆ.

ಈ ಫಲಾವಳಿಯಲ್ಲಿ ಗರುಡನನ್ನು ಚಿತ್ರಿಸಲು ತಾನಾಜಿ ರವರು 36 ಗಂಟೆಗಳನ್ನು ತೆಗೆದುಕೊಂಡಿದ್ದಾರೆ. ಫಲಾವಳಿ ಕಟ್ಟುವಾಗ ಒಂದು ಕಾಯಿ ಕೆಳಗೆ ಬಿದ್ದರೂ ಇಡೀ ಕಲಾ ಕೌಶಲವೇ ಮುರಿಯಬಹುದಾಗಿದ್ದರಿಂದ ಅದನ್ನು ಸೂಕ್ತ ಕಾಳಜಿಯಿಂದ ನಿರ್ಮಿಸಲಾಗಿದೆ ಎಂದು ತಾನಾಜಿ ಮಾಹಿತಿ ನೀಡಿದರು.