Banner Ad

ಸುದ್ದಿ ಕನ್ನಡ ವಾರ್ತೆ

ಕುಮಟಾ: ಲಿಪ್ಟ್ ನಲ್ಲಿ ಎದೆಯ ಬಾಗ ಸಿಲುಕಿಕೊಂಡ ಪರಿಣಾಮ ಕಾರ್ಮಿನಕನೋರ್ವ ಮೃತಪಟ್ಟ ಘಟನೆ ಪಟ್ಟಣದ ಸುಭಾಷ್ ರಸ್ತೆಯ ಜಗದಂಬಾ ಇಲೆಕ್ಟ್ರಿಕಲ್ಸ್ ನಲ್ಲಿ ಬುಧವಾರ ನಡೆದಿದೆ.

Banner Ad

ರಾಜಸ್ಥಾನ್ದ ಜೋದಪುರ್ ನಿವಾಸಿ ಗೋಪಾಲಸಿಂಗ್ ಇಂದೋ (24) ಎಂಬಾತನೇ ಮೃತಪಟ್ಟ ವ್ಯಕ್ತಿಯಾಗಿದ್ದಾನೆ.ಈತ ನರೇಂದ್ರಸಿಂಗ್ ಹಾಗೂ ಲಕ್ಷ್ಮಣಸಿಂಗ್ ರಾಥೋಡ್ ಎನ್ನುವವರಿಗೆ ಸೇರಿದ ಜಗದಂಬಾ ಇಲೆಕ್ಟ್ರಿಕಲ್ಸ್ ನಲ್ಲಿ ಕಳೆದ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.ಈತ ಗ್ರಾಹಕರಿಗೆ ಬೇಕಾದ ಸಾಮಾಗ್ರಿಗಳನ್ನು ತರಲು ಮೆಟ್ಟಿಲುಗಳ ಮೂಲಕ ಮೇಲಿನ ಮಹಡಿಗೆ ತೆರಳಿದ್ದು, ಬಳಿಕ ಅಲ್ಲಿಂದ ಸಾಮಾಗ್ರಿಗಳನ್ನು ಲಿಪ್ಟ್ ನಲ್ಲಿ ಹಾಕಿಕೊಂಡು ಕೆಳಗಡೆ ಬರುವಾಗ ಲಿಪ್ಟ್ ನ ಬಾಗಿಲಲ್ಲಿ ಎದೆ ಸಿಲುಕಿಕೊಂಡಿದೆ.ಈ ವೇಳೆ ಒಳಗೆ ಹೋಗಲಾರದ,ಹೊರಗೂ ಬರಲಾಗದೆ ಸ್ಥಳದಲ್ಲಿ ಮೃತಪಟ್ಟಿರುದುದಾಗಿ ತಿಳಿದು ಬಂದಿದೆ.

ಘಟನಾ ಸಂಭಂದಿಸಿದಂತೆ ಇನ್ನೋರ್ವ ಕಾರ್ಮಿಕ ಉದಯ ಮಹಾದೇವ ನಾಯ್ಕ ಎನ್ನುವವರು ಕುಮಟಾ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೂರ್ಣ ಪ್ರಮಾಣದಲ್ಲಿ ಲಿಪ್ಟ್ ನ್ನು ಸರಿಪಡಿಸದೇ ಉಪಯೋಗಿಸಿದ್ದು ಈ ಘಟನೆಗೆ ಕಾರಣವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡ ಪೋಲಿಸರು ತನಿಖೆ ಕೈಗೊಂಡಿದ್ದಾರೆ.

Banner Ad